alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲಿ ರಷ್ಯಾ ಪ್ರವಾಸಿಗ ಮಾಡಿದ್ದೇನು ಗೊತ್ತಾ?

ಚೆನ್ನೈ: ಭಾರತ ಪ್ರವಾಸಕ್ಕೆ ಬಂದ ರಷ್ಯಾ ಪ್ರವಾಸಿಗನೊಬ್ಬ ದೇವಾಲಯದ ಎದುರು ಭಿಕ್ಷೆ ಬೇಡಿದ್ದಾನೆ. ಮಾನ್ಯತೆ ಹೊಂದಿರುವ ಪಾಸ್ ಪೋರ್ಟ್ ಮತ್ತು ವೀಸಾ ಸಹಿತ ಭಾರತ ಪ್ರವಾಸಕ್ಕೆ ಬಂದ ರಷ್ಯಾದ ಎ. ಇವಾಂಜೆಲಿನ್(24) ತಮಿಳುನಾಡಿಗೆ ಆಗಮಿಸಿದ್ದಾರೆ.

ಕಾಂಚೀಪುರಂಗೆ ಭೇಟಿ ನೀಡಿದ್ದ ಅವರು, ವಿವಿಧ ದೇವಾಲಯಗಳಿಗೆ ತೆರಳಿ ವೀಕ್ಷಿಸಿದ ಬಳಿಕ ಶ್ರೀಕುಮಾರಕೊಟ್ಟಮ್ ದೇವಾಲಯಕ್ಕೆ ಆಗಮಿಸಿದ್ದಾರೆ.

ಸಮೀಪದಲ್ಲೇ ಇದ್ದ ಎ.ಟಿ.ಎಂ.ಗೆ ಹೋಗಿ, ಹಣ ಪಡೆಯಲು ಮುಂದಾಗಿದ್ದು, ಪಿನ್ ಲಾಕ್ ಆಗಿದ್ದರಿಂದ ಹಣ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ. ಕೈಯಲ್ಲಿ ಹಣವಿಲ್ಲದ ಕಾರಣ ದೇವಾಲಯದ ಎದುರಲ್ಲೇ ಕುಳಿತು ಭಿಕ್ಷೆ ಬೇಡಿದ್ದಾರೆ. ದೇವಾಲಯಕ್ಕೆ ಬಂದಿದ್ದ ಭಕ್ತರು, ವಿದೇಶಿ ಪ್ರವಾಸಿಗನಿಗೆ ಹಣ ಕೊಟ್ಟಿದ್ದಾರೆ.

ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಶಿವಕಂಚಿ ಪೊಲೀಸರು ಇವಾಂಜೆಲಿನ್ ಅವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ನಿಜ ಸಂಗತಿ ಗೊತ್ತಾಗಿದೆ. ಪೊಲೀಸರೇ ಆತನಿಗೆ ಹಣಕೊಟ್ಟು ಚೆನ್ನೈಗೆ ಕಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...