alex Certify
ಕನ್ನಡ ದುನಿಯಾ       Mobile App
       

Kannada Duniya

ಧಾರ್ಮಿಕ ಕಾರ್ಯಕ್ರಮದಲ್ಲಿ ಅಶ್ಲೀಲ ಡಾನ್ಸ್

ಭಗವತ್ ಕಥಾ ವೇಳೆ ವಿದೇಶಿ ಮಹಿಳೆಯೊಬ್ಬಳು ಅಶ್ಲೀಲ ಬೆಲ್ಲಿ ಡಾನ್ಸ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಘಟನೆ ನಡೆದಿದೆ.

ಕಳೆದ 7 ದಿನಗಳಿಂದ ಗೋವರ್ಧನ ನಾಥ್ ನ ಧರ್ಮಶಾಲೆಯಲ್ಲಿ ಶ್ರೀಮದ್ ಭಾಗವತ್ ಕಥಾ ನಡೆಯುತ್ತಿತ್ತು. ಉದ್ಯಮಿ ಸತೀಶ್ ಮಾರ್ವಾಡಿ ಈ ಕಥೆಯನ್ನು ಆಯೋಜಿಸಿದ್ದರು. ಭಾನುವಾರ ಸುಮಾರು 5 ಗಂಟೆ ವೇಳೆಗೆ ದೊಡ್ಡದಾಗಿ ಹಾಡು ಕೇಳಿ ಬಂದಿದೆ. ಸಂಗೀತ್ ಬಜೇಗಾ ಲೌಡ್ ತೋ ರಾಧಾ ನಾಚೆಗಿ ಹಾಡಿಗೆ ವಿದೇಶಿ ಹುಡುಗಿಯೊಬ್ಬಳು ಡಾನ್ಸ್ ಮಾಡಲು ಶುರುಮಾಡಿದ್ದಾಳೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಅಶ್ಲೀಲ ಡಾನ್ಸ್ ನೋಡಿದ ಜನರು ಮುಜುಗರಕ್ಕೊಳಗಾಗಿದ್ದಾರೆ. ಕೆಲವರು ಎದ್ದು ಹೋದ್ರೆ ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಹಿಂದೂ ಸಂಘಟನೆಗಳು ಈ ಕಾರ್ಯಕ್ರಮದ ವಿರುದ್ಧ ದನಿ ಎತ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...