alex Certify
ಕನ್ನಡ ದುನಿಯಾ       Mobile App
       

Kannada Duniya

ಪ. ಬಂಗಾಳದಲ್ಲಿ ಪೂಜೆ ಮಾಡಲೂ ಸರಕಾರದ ಅನುಮತಿ ಬೇಕು: ಮೋದಿ ಟೀಕೆ

ಪಶ್ಚಿಮ ಬಂಗಾಳದಲ್ಲಿ ಪೂಜೆ ಮಾಡಲೂ ಅನುಮತಿ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಮಿದನಪೂರದಲ್ಲಿ ಕಿಸಾನ್ ಕಲ್ಯಾಣ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವೋಟ್‌ ಬ್ಯಾಂಕ್‌ ಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರ ಇದಾಗಿದೆ. ಈ ಸರ್ಕಾರದಿಂದ ಜನರಿಗೆ ನೆಮ್ಮದಿ ಇಲ್ಲವಾಗಿದೆ. ದಶಕಗಳಿಂದ ಎಡಪಕ್ಷದ ಸರಕಾರ ಪಶ್ಚಿಮ ಬಂಗಾಳಕ್ಕೆ ಹಾನಿ ಮಾಡಿದೆ. ಟಿಎಂಸಿ ಅಧಿಕಾರಕ್ಕೆ ಬಂದ ಮೇಲಂತೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಟೀಕಿಸಿದ್ದಾರೆ.

ವಿರೋಧಿಗಳನ್ನು ಎದುರಿಸಲಾಗದಿದ್ದರೆ ಅವರನ್ನು ಮುಗಿಸಿಬಿಡು ಎನ್ನುವ ಕ್ರಮವನ್ನು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರ ಅನುಸರಿಸುತ್ತಿದೆ ಎಂದು ಹೇಳಿದರಲ್ಲದೇ  ಚಿಟ್‌ ಫಂಡ್, ಸಿಂಡಿಕೇಟ್ ಮತ್ತು ಆಲೂಗಡ್ಡೆ ಬಾಂಡ್ ವಿಚಾರವಾಗಿ ಟಿಎಂಸಿ ಸರ್ಕಾರವನ್ನು ಮೋದಿ ತರಾಟೆಗೆ ತೆಗೆದುಕೊಂಡರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...