alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹದ ಅಂತಿಮ ಹಂತದಲ್ಲಿ ಈ ವಧು ಮಾಡಿದ್ದೇನು ಗೊತ್ತಾ…?

ಸಿನಿಮೀಯ ಘಟನೆಯೊಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಮದುವೆ ಮಂಟಪ ಬಿಟ್ಟು ವಧು ತನ್ನ ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಾಳೆ. ಸಿರಿಪುರಂನಲ್ಲಿರೋ ಚರ್ಚ್ ನಲ್ಲಿ ಮದುವೆ ಆಯೋಜಿಸಲಾಗಿತ್ತು. ವಧು ಮತ್ತು ವರನ ಸಂಬಂಧಿಕರಲ್ಲಿ ಸಂಭ್ರಮ ಮನೆಮಾಡಿತ್ತು.

ಪ್ರಾರ್ಥನೆಯೊಂದಿಗೆ ಚರ್ಚ್ ನಲ್ಲಿ ಸಮಾರಂಭ ಆರಂಭವಾಗಿದೆ. ಅತಿಥಿಗಳೆಲ್ಲ ಒಬ್ಬೊಬ್ಬರಾಗಿಯೇ ಆಗಮಿಸಿದ್ರು. ಬೈಬಲ್ ಓದಿದ ಪಾದ್ರಿ, ಮದುವೆಯ ವಿಧಿ-ವಿಧಾನಗಳನ್ನು ಶುರು ಮಾಡಿದ್ರು. ಮದುವೆಗೆ ಸಮ್ಮತಿ ಇದೆಯಾ ಅಂತ ವರನನ್ನು ಕೇಳಿದ್ರು. ಆತ ಹೌದು ಎಂದ.

ವರನ ಹೆಸರು ಉಲ್ಲೇಖಿಸಿದ ಪಾದ್ರಿ, ಆತನನ್ನು ಪತಿಯಾಗಿ ಸ್ವೀಕರಿಸುತ್ತೀಯಾ ಎಂದು ಕೇಳಿದ್ರು. ಒಂದೆರಡು ಕ್ಷಣ ವಧು ಸುಮ್ಮನಾದ್ಲು, ನಂತರ ನನಗೆ ಆತನನ್ನು ಮದುವೆಯಾಗಲು ಇಷ್ಟವಿಲ್ಲ ಎಂದುಬಿಟ್ಲು. ಕೂಡಲೇ ತಲೆ ಮೇಲೆ ಹಾಕಿಕೊಂಡಿದ್ದ ದುಪ್ಪಟ್ಟಾ ತೆಗೆದು ವರನ ಕೈಯಲ್ಲಿ ಕೊಟ್ಲು.

ನಾನು ನನ್ನ ಪ್ರಿಯಕರನ ಬಳಿ ಹೋಗುತ್ತಿದ್ದೇನೆ ಅಂತಾ ಹೇಳಿ, ಡಯಾಸ್ ನಿಂದ ಕೆಳಗೆ ಜಂಪ್ ಮಾಡಿದ್ಲು. ಪ್ರಿಯಕರನ ಜೊತೆಗೆ ಹೊರಟೇ ಹೋದ್ಲು. ಇಷ್ಟೆಲ್ಲಾ ಆಗ್ತಿದ್ದಂತೆ ವಧು ಮತ್ತು ವರನ ಕಡೆಯವರು ಮುಜುಗರಕ್ಕೀಡಾದ್ರು. ವರನ ಕಡೆಯವರು ವಧುವಿನ ಹೆತ್ತವರ ಮೇಲೆ ಕೋಪ ಮಾಡಿಕೊಂಡು ಹೊರಟೇ ಬಿಟ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...