alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಶಾನದಲ್ಲಿ ಸದ್ದು ಮಾಡ್ತು 500, 1000 ದ ನೋಟು

note_1478667716

ಮೋದಿ ಸರ್ಕಾರ 500, ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದೆ. ಇದು ಜನಸಾಮಾನ್ಯರಿಗೆ ಸ್ವಲ್ಪ ಸಮಸ್ಯೆಯನ್ನೊಡ್ಡಿದೆ. ಆದ್ರೆ ಘಾಜಿಯಾಬಾದ್ ಸ್ಮಶಾನದಲ್ಲಿ ನಡೆದ ಘಟನೆ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಬೆಳ್ಳಂಬೆಳಿಗ್ಗೆ ನಾಲ್ಕೈದು ಬಾಕ್ಸ್ ಘಾಜಿಯಾಬಾದ್ ನ ಲಿಂಕ್ ರಸ್ತೆಯ ಸ್ಮಶಾನದಲ್ಲಿ ಬಿದ್ದಿತ್ತು. ಇದನ್ನು ನೋಡಿದ ಜನರು ಇದ್ರಲ್ಲಿ 500 ಹಾಗೂ ಸಾವಿರದ ನೋಟುಗಳಿವೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಸುದ್ದಿ ತಿಳಿದವರು ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಜೊತೆಗೆ ಸಂಬಂಧಿಕರನ್ನೂ ಕರೆದುಕೊಂಡು ಬಂದಿದ್ದಾರೆ.

ಜನ ಜಾತ್ರೆಯಾಗ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.ದುರಂತ ಅಂದ್ರೆ ಬಾಕ್ಸ್ ನಲ್ಲಿದ್ದಿದ್ದು ನೋಟಾಗಿರಲಿಲ್ಲ. ಹಳೆಯ ಬಟ್ಟೆಗಳಾಗಿತ್ತು. ಸ್ಥಳದಲ್ಲಿ ನೆರೆದಿದ್ದ ಜನರನ್ನು ಚದುರಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...