alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಲ್ಲರೆ ಕಾಸನ್ನೂ ಬಿಡದ ಮಿಲಿಯನೇರ್ ವಿಜಯ್ ಮಲ್ಯ

vijay-mallya 22

ನವದೆಹಲಿ: ಮದ್ಯ ದೊರೆ, ಮಿಲಿಯನೇರ್ ವಿಜಯ್ ಮಲ್ಯ ರಾಜ್ಯಸಭೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಕಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಒಂದೇ ಒಂದು ಪೈಸೆಯನ್ನೂ ಕೂಡ ಬಿಡದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ.

ಶ್ರೀಮಂತ ಉದ್ಯಮಿ ವಿಜಯ್ ಮಲ್ಯ ವಿವಿಧ ಬ್ಯಾಂಕ್ ಗಳಲ್ಲಿ ಪಡೆದುಕೊಂಡಿರುವ ಸುಮಾರು 9000 ಕೋಟಿ ರೂ. ಸಾಲ ಮರುಪಾವತಿ ಮಾಡದೇ, ವಿದೇಶಕ್ಕೆ ಹೋಗಿದ್ದಾರೆ. ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿ ಶಿಕ್ಷೆಯನ್ನು ವಿಧಿಸಲಾಗಿದೆ. ಎರಡು ಅವಧಿಗೆ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಕಚೇರಿ ನಿರ್ವಹಣೆ ವೆಚ್ಛವೆಂದು ನೀಡುತ್ತಿದ್ದ ಸಣ್ಣ ಮೊತ್ತದ ಹಣವನ್ನು ಕೂಡ ಬಿಡದೇ ಪಡೆದುಕೊಂಡಿದ್ದಾರೆ. ಕಚೇರಿ ನಿರ್ವಹಣೆಗೆ 6,000 ರೂ. ಭತ್ಯೆ ನೀಡಲಾಗುತ್ತಿತ್ತು. ಅದನ್ನೂ ಬಿಟ್ಟಿಲ್ಲ ಮಲ್ಯ.

ಅಲ್ಲದೇ, 50,000 ರೂ. ವೇತನ, ಕ್ಷೇತ್ರ ಭತ್ಯೆ 20,000 ರೂ., 1.73 ಲಕ್ಷ ರೂ ಫೋನ್ ಬಿಲ್ ಕೂಡ ಪಡೆದುಕೊಂಡಿದ್ದಾರೆ. ಅವರಿಗೆ 50,000 ಲೋಕಲ್ ಕಾಲ್ ಫ್ರೀ ಇದ್ದರೂ, ಇಷ್ಟೊಂದು ದೊಡ್ಡ ಮೊತ್ತ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಮಹಮ್ಮದ್ ಖಾಲೀದ್ ಜಿಲಾನಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ಮಾಹಿತಿಯಲ್ಲಿ ಈ ಸಂಗತಿ ಗೊತ್ತಾಗಿದೆ.

2002ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಯ ಕಾಂಗ್ರೆಸ್, ಜೆಡಿಎಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2010ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲದೊಂದಿಗೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದು, ಜುಲೈನಲ್ಲಿ ಅವರ ಅವಧಿ ಕೊನೆಗೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...