alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಟಿ.ಐ. ಅಡಿ ಮಾಹಿತಿ ನೀಡಲು ಜಿ.ಎಸ್.ಟಿ. ಕೇಳಿದ ಸರ್ಕಾರ…!

ಆತ ಸರ್ಕಾರದಿಂದ ಕೇಳಿದ್ದು ಮಾಹಿತಿ. ಆದ್ರೆ ಆತನಿಗೆ ಸಿಕ್ಕಿದ್ದು ಜಿ.ಎಸ್.ಟಿ. ಪಾವತಿಸುವ ಆದೇಶ. ಹೌದು, ನಿಮಗೆ ವಿಚಿತ್ರ ಅನ್ನಿಸುತ್ತಿರುವ ಈ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನೆಲೆಸಿರುವ ಅಜಯ್ ದುಬೆ ಎಂಬ ಆರ್ಟಿಐ ಕಾರ್ಯಕರ್ತ ಕೇಳಿದಂತ ಮಾಹಿತಿಯನ್ನ ಜಿ.ಎಸ್.ಟಿ. ಪಡೆದು ನೀಡಿರುವ ಘಟನೆ ನಡೆದಿದೆ. ಮಧ್ಯ ಪ್ರದೇಶ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಇಂತದೊಂದು ವಿಚಿತ್ರ ಘಟನೆ ನಡೆದಿದೆ.

ಮಧ್ಯ ಪ್ರದೇಶದ ರಿಯಲ್ ಎಸ್ಟೇಟ್ ರೆಗ್ಯುಲೇಟರ್ ಅಥಾರಿಟಿಯ ಕಟ್ಟಡ ನವೀಕರಣಕ್ಕೆ ತಗುಲಿದ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ಅಜಯ್ ದುಬೆ ಅರ್ಜಿ ದಾಖಲಿಸಿದ್ದರು. ಆದ್ರೆ ಇದಕ್ಕೆ ಸರ್ಕಾರದ ಅಧಿಕಾರಿಗಳಿಂದ ಸಿಕ್ಕಂತಾ ಉತ್ತರ ಅಜಯ್ ದುಬೆ ಅವರನ್ನ ದಂಗುಬಡಿಸಿತ್ತು. ಮಾಹಿತಿಯನ್ನು ಒಳಗೊಂಡಿರುವ ಪ್ರತಿಯನ್ನು ನೀಡೋದಕ್ಕೆ ಅರ್ಜಿದಾರ ಜಿ.ಎಸ್.ಟಿ. ಪಾವತಿಸುವಂತೆ ಉತ್ತರ ಬಂತು.

ಆ ಪ್ರಕಾರ ಅಜಯ್ ದುಬೆ ಶೇಕಡಾ 9 ರಷ್ಟು ಜಿ.ಎಸ್.ಟಿ. ಪಾವತಿಸಿಯೇ ತಮ್ಮ ಮಾಹಿತಿಯನ್ನು ಪಡೆದುಕೊಂಡರು. 18 ಪುಟಗಳ ಮಾಹಿತಿಗಾಗಿ ಅವರು 43 ರೂಪಾಯಿಯನ್ನು ಪಾವತಿಸಿದ್ದಾರೆ. ಪ್ರತಿ ಪುಟಕ್ಕೆ 2 ರೂಪಾಯಿಯನ್ನ ಅವರು ಜಿ.ಎಸ್.ಟಿ.ಯಾಗಿ ಪಾವತಿಸಿದ್ದಾರೆ. 3 ರೂಪಾಯಿ 50 ಪೈಸೆ ಜಿ.ಎಸ್.ಟಿ. ಮತ್ತು 3.50 ರೂಪಾಯಿ ಎಸ್ಜಿಎಸ್ಟಿ ಕೂಡ ಪಾವತಿಯಾಗಿದೆ.

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿ.ಎಸ್.ಟಿ. ಕಮಿಟಿ ಪ್ರಸಕ್ತ ವರ್ಷದ ಜನವರಿಯಲ್ಲಿ ನಡೆಸಿದ ಸಭೆಯಲ್ಲಿ ಮಾಹಿತಿ ಕಾಯ್ದೆ ಹಕ್ಕಿನಲ್ಲಿ ನೀಡಲಾಗುವ ವಿವರಗಳನ್ನ ಜಿ.ಎಸ್.ಟಿ.ಯಿಂದ ವಿನಾಯಿತಿ ನೀಡೋದಕ್ಕೆ ಶಿಫಾರಸ್ಸು ಸಲ್ಲಿಸಲಾಗಿತ್ತು. ಹಾಗಿದ್ದರು ಮಾಹಿತಿ ಹಕ್ಕಿಗೆ ಜಿ.ಎಸ್.ಟಿ. ವಿಧಿಸಿದ್ದಕ್ಕೆ ಆರ್ಟಿಐ ಕಾರ್ಯಕರ್ತ ಬೇಸರ ಮಾಡಿಕೊಂಡಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರೋದಾಗಿ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...