alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಶಾಲಾ ಬಸ್ಸನ್ನೇ ಬಾರ್ ಮಾಡಿಕೊಂಡ ರಾಜಕೀಯ ಕಾರ್ಯಕರ್ತರು

ಹೈದರಾಬಾದ್: ತೆಲಂಗಾಣದ ಟಿ.ಆರ್.ಎಸ್. ಕಾರ್ಯಕರ್ತರು ಶಾಲಾ ಬಸ್ಸನ್ನು ಮೊಬೈಲ್ ಬಾರ್ ರೀತಿ ಬಳಸಿಕೊಂಡ ಪ್ರಕರಣ ಈಗ ವಿವಾದಕ್ಕೆ ಕಾರಣವಾಗಿದೆ.

ತೆಲಂಗಾಣದಲ್ಲಿ ಆಡಳಿತದಲ್ಲಿರುವ ತೆಲಂಗಾಣ ರಾಷ್ಟ್ರಸಮಿತಿ ಹಮ್ಮಿಕೊಂಡಿದ್ದ ಪ್ರಗತಿ ನಿವೇದನಾ ಸಭಾ ಸಮಾವೇಶಕ್ಕೆ ಕರೆತರಲು ಬಸ್, ಟ್ರ್ಯಾಕ್ಟರ್ ಮತ್ತಿತರ ವಾಹನ ಬಳಸಿಕೊಳ್ಳಲಾಗಿತ್ತು. ಇಬ್ರಾಹಿಂ ಪಟ್ಟಣ ಸಮೀಪದ ಕೊಂಗರಾದಲ್ಲಿ ಬಳಕೆಯಾದ ಶಾಲಾ ಬಸ್ಸುಗಳು ಮತ್ತು ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಮದ್ಯದ ಬಾಟಲಿಗಳು ದಾಸ್ತಾನಾಗಿದ್ದು, ಕಾರ್ಯಕರ್ತರು ಬಸ್ ಒಳಗೆ ಪಾರ್ಟಿ ಮಾಡಿದ್ದಾರೆ.

ಬಸ್ ಒಳಗೆ ಪಾರ್ಟಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಸ್ಸುಗಳನ್ನು ಮೊಬೈಲ್ ಬಾರ್ ರೀತಿ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದ ಪಕ್ಷದ ನಾಯಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬಿಜೆಪಿ, ಮುಖ್ಯಮಂತ್ರಿಯನ್ನು ಒತ್ತಾಯಿಸಿದರೆ, ಬಸ್ ಗಳಲ್ಲಿ ಈ ರೀತಿ ಮದ್ಯ ವಿತರಣೆಯಾಗಿದ್ದು, ತಲೆ ತಗ್ಗಿಸುವ ವಿಚಾರ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...