alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಬ್ಬ RSS ಕಾರ್ಯಕರ್ತನ ಹತ್ಯೆ

ತ್ರಿಶ್ಯೂರ್: ಕೇರಳದ ತ್ರಿಶ್ಯೂರ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್.ಎಸ್.ಎಸ್.) ಮತ್ತೊಬ್ಬ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ.

ಆನಂದ್ ಕೊಲೆಯಾದ ಕಾರ್ಯಕರ್ತ. ಸಿ.ಪಿ.ಎಂ. ಕಾರ್ಯಕರ್ತ ಫಾಝಿಲ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆನಂದ್ ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ.

ತ್ರಿಶ್ಯೂರ್ ನ ನೆನಮಾನಿಕರದಲ್ಲಿ ಬೈಕ್ ನಲ್ಲಿ ಹೋಗುವಾಗ, ಆನಂದ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿದ್ದಾರೆ. ಆನಂದ್ ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ.

ಇದು ರಾಜಕೀಯ ದ್ವೇಷದ ಹತ್ಯೆಯಾಗಿದ್ದು, ದಾಳಿಯ ಹಿಂದೆ ಸಿ.ಪಿ.ಎಂ. ಕಾರ್ಯಕರ್ತರಿದ್ದಾರೆ ಎಂದು ಬಿ.ಜೆ.ಪಿ. ಆರೋಪಿಸಿದೆ.

ಕೇರಳ ಬಿ.ಜೆ.ಪಿ. ನಾಯಕ ಕುಮ್ಮಾನಮ್ ರಾಜಶೇಖರನ್ ಪ್ರತಿಕ್ರಿಯೆ ನೀಡಿ, ಕೇರಳದಲ್ಲಿ ಎಡಪಂಥೀಯ ಭಯೋತ್ಪಾದಕರಿಂದ ರಕ್ತಪಾತ ನಡೆಯುತ್ತಿದೆ. ಕಮ್ಯೂನಿಸ್ಟ್ ಭಯೋತ್ಪಾದನೆ ಮುಂದುವರೆದಿದ್ದು, ಬಿ.ಜೆ.ಪಿ. ಕಾರ್ಯಕರ್ತ ಆನಂದ್ ನನ್ನು ತ್ರಿಶೂರ್ ನಲ್ಲಿ ಕ್ರೂರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...