alex Certify
ಕನ್ನಡ ದುನಿಯಾ       Mobile App
       

Kannada Duniya

ಜನರ ಕೈ ಸೇರುವ ಮೊದಲೇ ಚಲಾವಣೆಗೆ ಬಂದಿವೆ 200 ರೂ. ನಕಲಿ ನೋಟು…!

ಕಳೆದ ವರ್ಷ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ ಹೊಸದಾಗಿ 2000 ರೂ. ಮತ್ತು 500 ರೂ. ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಇದಾದ ಬಳಿಕ ಚಿಲ್ಲರೆ ಸಮಸ್ಯೆ ಕಾರಣದಿಂದ ಹೊಸ 200 ರೂ. ನೋಟ್ ಪರಿಚಯಿಸಲಾಗಿದೆ.

ಹೊಸ 200 ರೂ. ನೋಟು ಇನ್ನೂ ಪೂರ್ಣ ಪ್ರಮಾಣದಲ್ಲಿ ಚಲಾವಣೆಗೆ ಬಂದಿಲ್ಲ. ಬಹುತೇಕ ಜನ 200 ರೂ. ನೋಟನ್ನು ನೋಡಿಲ್ಲ. ಹೀಗಿರುವಾಗಲೇ 200 ರೂ. ಮುಖಬೆಲೆಯ ನಕಲಿ ನೋಟುಗಳು ಚಲಾವಣೆಗೆ ಬಂದಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ, 6 ಲಕ್ಷ ರೂ. ಮೌಲ್ಯದ 200 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಧ್ರಾದ ಬಾಡಿಗೆ ಮನೆಯಲ್ಲಿ ಈ ನಕಲಿ ನೋಟುಗಳನ್ನು ಮುದ್ರಿಸಲಾಗಿದೆ. ರೇಸಿ ಜಿಲ್ಲೆಯ ಚಾಸಾನ ಪ್ರದೇಶದ ಸುಂಗ್ರಿಯ ಮೊಹಮ್ಮದ್ ಮಕ್ಬೂಲ್ ಬಳಿ, ನಕಲಿ ಕರೆನ್ಸಿ ನೋಟು ಪತ್ತೆಯಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ನೋಟಿನ ಸಂಗತಿ ಬಯಲಾಗಿದೆ.

ಕುಲ್ಗಾಮ್ ಜಿಲ್ಲೆಯ ನೂಪುರ್ ದ ಶೌಕತ್ ಅಹಮ್ಮದ್ ಬಂಧಿತ ಪ್ರಮುಖ ಆರೋಪಿಯಾಗಿದ್ದಾನೆ. ಈತನಿಂದ 200 ರೂ. ಮುಖಬೆಲೆಯ ನೋಟು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ರಯಾಸಿ ಪೊಲೀಸ್ ಅಧೀಕ್ಷಕ ತಾಹಿತ್ ಸಾಜಿದ್ ಭಟ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...