alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣದಲ್ಲಿ ಈವರೆಗೆ ವಶಪಡಿಸಿಕೊಂಡಿರುವ ಹಣವೆಷ್ಟು ಗೊತ್ತಾ?

ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಅಕ್ರಮ ಹಣ, ಮದ್ಯ ಸರಬರಾಜು ದೊಡ್ಡ ಪ್ರಮಾಣದಲ್ಲಿ ಜಾಗೃತ ದಳದ ಕೈಗೆ ಸಿಕ್ಕಿದೆ.

ಬುಧವಾರದವರೆಗಿನ ಚುನಾವಣಾ ಆಯೋಗದ ಲೆಕ್ಕಾಚಾರದ ಪ್ರಕಾರ 86.5 ಕೋಟಿ ರೂ. ನಗದು ಸಿಕ್ಕಿದ್ದು, ಬರೋಬ್ಬರಿ ನಾಲ್ಕು ಲಕ್ಷ ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿಸೆಂಬರ್ 7ರಂದು ಬೆಳಗ್ಗೆ 7ರಿಂದ ಸಂಜೆವರೆಗೆ ಮತದಾನ ನಡೆಯಲಿದ್ದು, ಎಲ್ಲೆಡೆ ಬಿಗಿಭದ್ರತೆ ನೀಡಲಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಪೊಲೀಸ್ ಮಹಾ ನಿರ್ದೇಶಕ ಜಿತೇಂದ್ರ ಅವರು ನೀಡಿರುವ ಮಾಹಿತಿ ಪ್ರಕಾರ, ಕಳೆದ ಮೂರು ತಿಂಗಳಲ್ಲಿ 11 ಸಾವಿರ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ. ಸುಮಾರು 8400 ಶಸ್ತ್ರಾಸ್ತ್ರವನ್ನು ಠೇವಣಿ ಇಟ್ಟುಕೊಳ್ಳಲಾಗಿದೆ.

32 ಸಾವಿರ ಮತದಾನ ಕೇಂದ್ರದ ಪೈಕಿ ನಾಲ್ಕು ಸಾವಿರ ಕೇಂದ್ರಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೂಂಬಿಂಗ್ ಹೆಚ್ಚಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಬಹುತೇಕ ಅಭ್ಯರ್ಥಿಗಳಿಗೆ ಭದ್ರತೆ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...