alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತವಾಗಿ ಬಂದಿದ್ದ ಮಸಾಲಾ ನೀಡದ್ದಕ್ಕೆ ಬಿತ್ತು ದಂಡ

ವಸ್ತುವಿನೊಂದಿಗೆ ಉಚಿತವಾಗಿ ಬಂದಿರೋ ಪ್ರಮೋಷನಲ್ ಆಫರ್ ಅನ್ನು ಗ್ರಾಹಕನಿಗೆ ನೀಡದೇ ವಂಚಿಸಿದ್ದಕ್ಕಾಗಿ ಅಂಗಡಿ ಮಾಲೀಕನೋರ್ವನಿಗೆ 6 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ  ಆದೇಶಿಸಿದೆ.

ಪಂಜಾಬ್ ನ ಲುಧಿಯಾನದಲ್ಲಿ ಮೋರ್ ಕ್ವಾಲಿಟಿ ಫಸ್ಟ್ ಸ್ಟೋರ್ ಎಂಬಲ್ಲಿ ಕುನಾಲ್ ಸೋಫಾಟ್ ಎಂಬಾತ 750 ಗ್ರಾಂ ಫ್ರೆಂಚ್ ಫ್ರೈಸ್ ಖರೀದಿಸಿದ್ದ. ಆದರೆ ಇದಕ್ಕೆ ಪ್ರಮೋಷನಲ್ ಆಫರ್ ಆಗಿ ಬಂದಿದ್ದ ಮೆಕ್ ಕೇನ್ ಮಸಾಲಾವನ್ನು ಅಂಗಡಿಯಾತ ನೀಡಿರಲಿಲ್ಲ.

ಈ ಬಗ್ಗೆ ಕುನಾಲ್ ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದ. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, 6000 ರೂ. ದಂಡವನ್ನು ಗ್ರಾಹಕನಿಗೆ ನೀಡುವಂತೆ ಅಂಗಡಿ ಮಾಲೀಕನಿಗೆ ಆದೇಶಿಸಿದೆ. ಇದರಲ್ಲಿ 1 ಸಾವಿರ ರೂ. ಸೇವಾ ಕೊರತೆ, 3000 ರೂ. ಮಾನಸಿಕ ಹಿಂಸೆ ಹಾಗೂ 2000 ರೂ. ಕೋರ್ಟ್ ಖರ್ಚು ಸೇರಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...