alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿತ್ತು ಹಳೆ ನೋಟುಗಳ ಕಂತೆ

bag

ಮನೆಯಲ್ಲಿ ಕಂತೆ ಕಂತೆ ನೋಟುಗಳನ್ನು ಅಕ್ರಮವಾಗಿ ಪೇರಿಸಿ ಇಟ್ಟವರೆಲ್ಲ ಈಗ ದಿಕ್ಕು ತೋಚದಂತಾಗಿದ್ದಾರೆ. 500 ಹಾಗೂ 1000 ರೂಪಾಯಿ ನೋಟುಗಳನ್ನು ನಿಷೇಧಿಸಿರೋದ್ರಿಂದ ಆ ಹಣವನ್ನು ಉಳಿಸಿಕೊಳ್ಳಲು ಯಾವುದೇ ಮಾರ್ಗ ಇಲ್ಲದಂತಾಗಿದೆ.

ಕೆಲವರು ಮೂಟೆಗಟ್ಟಲೆ ನೋಟುಗಳನ್ನು ಸುಟ್ಟು ಹಾಕಿದ್ರೆ ಇನ್ನು ಕೆಲವರು ಕಂಡ ಕಂಡಲ್ಲಿ ಎಸೆಯುತ್ತಿದ್ದಾರೆ. ಪುಣೆಯ ನಡುರಸ್ತೆಯಲ್ಲಿ ನೋಟಿನ ಕಂತೆಗಳೇ ತುಂಬಿದ್ದ ಬ್ಯಾಗ್ ಒಂದು ಸಿಕ್ಕಿದೆ. ನೋಟು ತುಂಬಿದ್ದ ಪ್ಲಾಸ್ಟಿಕ್ ಚೀಲ ಚಿಂದಿ ಆಯುವವಳ ಕೈಗೆ ಸಿಕ್ಕಿದೆ.

ಅದರಲ್ಲಿದ್ದಿದ್ದೆಲ್ಲ 1000 ರೂಪಾಯಿ ನೋಟುಗಳು, ಒಟ್ಟು 52,000 ರೂಪಾಯಿ. ಶಾಂತಾ ಓವ್ಹಲ್ ಎಂಬಾಕೆ ಪುಣೆಯ ಲಾ ಕಾಲೇಜು ರಸ್ತೆಯಲ್ಲಿ ಸ್ವಚ್ಛ ಮಾಡುತ್ತಿದ್ದಾಗ ಹಣ ತುಂಬಿದ್ದ ಚೀಲ ದೊರೆತಿದೆ. ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ನೋಟಿನ ಕಂತೆಯ ಜೊತೆಗೆ ಸ್ವಲ್ಪ ಕಸವನ್ನು ಕೂಡ ಬ್ಯಾಗ್ ನಲ್ಲಿ ತುಂಬಿಡಲಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...