alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಸರ್ಕಾರ ಜಾಹೀರಾತಿಗಾಗಿ ವ್ಯಯಿಸಿರುವ ಹಣವೆಷ್ಟು ಗೊತ್ತಾ…?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ಪ್ರಚಾರಕ್ಕಾಗಿ ವ್ಯಯಿಸಿರುವ ಹಣದ ಮೊತ್ತ ಬಹಿರಂಗವಾಗಿದೆ. ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಅನಿಲ್ ಗಲಗಲಿ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಬಿಓಸಿ ಈ ಉತ್ತರ ನೀಡಿದ್ದು, ಒಟ್ಟು 4,343.26 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ.

2014 ಜೂನ್ ನಿಂದ ಮಾರ್ಚ್ 2015 ರ ಅವಧಿಯಲ್ಲಿ 953.54 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದ್ದು, ಈ ಪೈಕಿ 424.85 ಕೋಟಿ ರೂ. ಮುದ್ರಣ ಮಾಧ್ಯಮಕ್ಕೆ, 448.97 ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಹಾಗೂ 79.72 ಕೋಟಿ ರೂಪಾಯಿಗಳನ್ನು ಔಟ್ ಡೋರ್ ಪ್ರಚಾರಕ್ಕೆ ವಿನಿಯೋಗಿಸಲಾಗಿದೆ.

2015-16 ರ ಅವಧಿಯಲ್ಲಿ ಈ ಮೊತ್ತದಲ್ಲಿ ಭಾರೀ ಏರಿಕೆಯಾಗಿದ್ದು, ಒಟ್ಟು 1,171.11 ಕೋಟಿ ರೂಪಾಯಿಗಳನ್ನು ಪ್ರಚಾರಕ್ಕಾಗಿ ವ್ಯಯಿಸಲಾಗಿದೆ. ಈ ಪೈಕಿ ಮುದ್ರಣ ಮಾಧ್ಯಮಕ್ಕೆ 510.69 ಕೋಟಿ ರೂ. ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 541.99 ಕೋಟಿ ರೂ. ಹಾಗೂ ಔಟ್ ಡೋರ್ ಪ್ರಚಾರಕ್ಕೆ 118.43  ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.

2016-17 ರಲ್ಲಿ ಒಟ್ಟು 1,263.15 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಈ ಪೈಕಿ ಮುದ್ರಣ ಮಾಧ್ಯಮಕ್ಕೆ 463.38 ರೂ., ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 613.78 ಕೋಟಿ ರೂ. ಹಾಗೂ ಔಟ್ ಡೋರ್ ಪ್ರಚಾರಕ್ಕೆ 185.99 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.

ಏಪ್ರಿಲ್ 2017 ರಿಂದ ಮಾರ್ಚ್ 2018 ರ ಅವಧಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 475.13 ಕೋಟಿ ರೂ., ಔಟ್ ಡೋರ್ ಪ್ರಚಾರಕ್ಕೆ 147.10 ಕೋಟಿ ರೂ. ವ್ಯಯಿಸಲಾಗಿದ್ದು, ಏಪ್ರಿಲ್ 2017 ರಿಂದ ಡಿಸೆಂಬರ್ 2017 ರವರೆಗೆ  333.23 ಕೋಟಿ ರೂ. ಗಳನ್ನು ಮುದ್ರಣ ಮಾಧ್ಯಮದ ಪ್ರಚಾರಕ್ಕಾಗಿ ವಿನಿಯೋಗಿಸಲಾಗಿದೆ. ಮಾರ್ಚ್ 2018 ರವರೆಗೆ ಮುದ್ರಣ ಮಾಧ್ಯಮಕ್ಕೆ ಒಟ್ಟು 955.46 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...