alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಚತಾರಾ ಹೋಟೆಲ್ ಕೊಠಡಿಯ ಕದ ತಟ್ಟಿ ಅವಕ್ಕಾದ ಪೊಲೀಸರು…!

ಮುಂಬೈ ಪೊಲೀಸರ ಭರ್ಜರಿ ಬೇಟೆ ಆಡಿದ್ದಾರೆ. ತಮಗೆ ಸಿಕ್ಕ ಖಚಿತ ಮಾಹಿತಿಯ ಆಧಾರದ ಮೇರೆಗೆ ಪಂಚತಾರಾ ಹೋಟೆಲ್ ನ ಕೊಠಡಿಯೊಂದರ ಮೇಲೆ ದಾಳಿ ಮಾಡಿದ್ದು, 4.93 ಕೋಟಿ ರೂ. ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೈದರಾಬಾದ್ ನ ಕೆಲ ವ್ಯಕ್ತಿಗಳು ನಿಷೇಧಿತ ನೋಟಗಳ ಬದಲಾವಣೆಗೆಂದು ನಗರಕ್ಕೆ ಆಗಮಿಸಿರುವ ಮಾಹಿತಿ ಮುಂಬೈ ಪೊಲೀಸರಿಗೆ ತಲುಪಿತ್ತು. ಇದರ ಆಧಾರದ ಮೇಲೆ ಅಂಧೇರಿಯಲ್ಲಿರುವ ಪಂಚತಾರಾ ಹೋಟೆಲ್ ಗೆ ಪೊಲೀಸರು ಧಾವಿಸಿದ್ದರು.

ಅಲ್ಲಿನ ಕೊಠಡಿಯೊಂದರ ಬಾಗಿಲು ತಟ್ಟಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಬಾಗಿಲು ಮುರಿದು ಒಳ ನುಗ್ಗಿದ ಪೊಲೀಸರು ಅಲ್ಲಿನ ದೃಶ್ಯ ಕಂಡು ಅವಕ್ಕಾಗಿದ್ದಾರೆ. ಕೊಠಡಿಯಲ್ಲಿ ನಿಷೇಧಿತ 500 ಹಾಗೂ 1000 ರೂ. ಮುಖಬೆಲೆಯ ಸುಮಾರು 4.93 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಕಂಡುಬಂದಿದ್ದು, ಈ ಸಂಬಂಧ ಕೊಠಡಿಯಲ್ಲಿದ್ದ ಮೂವರನ್ನು ಬಂಧಿಸಲಾಗಿದೆ.

2016 ರ ನವೆಂಬರ್ ನಲ್ಲಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿದ್ದು, ಬದಲಾವಣೆಯ ಕಾಲಾವಕಾಶವೂ ಮುಗಿದಿದೆ. ಹೀಗಿದ್ದರೂ ಯಾರು ಮತ್ತು ಯಾಕಾಗಿ ಈ ನೋಟುಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಎಂಬ ಕುರಿತು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಹೈದರಾಬಾದ್ ನ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...