alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಇನ್ನೂ ಸಿಗುತ್ತಿವೆ ಕೋಟ್ಯಾಂತರ ಮೌಲ್ಯದ ನಿಷೇಧಿತ ನೋಟು

ಸೂರತ್‌: ಗುಜರಾತ್‌ನ ಕಟೋದರದಲ್ಲಿ 3.36 ಕೋಟಿ ರೂ. ಮೊತ್ತದ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಗಗನೀಶ್‌ ರಜ್‌ಪೂತ್‌, ಮೊಹಮ್ಮದ್‌ ಅಲಿ ಶೇಖ್‌ ಹಾಗೂ ಲತೀಫ್‌ ಶೇಖ್‌ ಬಂಧಿತರು.

ವಾಹನ ತಪಾಸಣೆ ವೇಳೆ ಕಾರೊಂದರಲ್ಲಿ 1 ಸಾವಿರ ಹಾಗೂ 500 ರೂ.ಗಳ ನಿಷೇಧಿತ ನೋಟುಗಳು ಸಿಕ್ಕಿದೆ. ಒಟ್ಟಾರೆ 500 ರೂ.ನ. 1.20 ಕೋಟಿ ರೂ. (24 ಸಾವಿರ ನೋಟುಗಳು) ಹಾಗೂ 1 ಸಾವಿರ ರೂ.ನ 2.16 ಕೋಟಿ ರೂ.ಗಳನ್ನು(21,600 ನೋಟುಗಳು) ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ ಆರೋಪಿಗಳ ಬಳಿ ಇದ್ದ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು, ಹಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...