alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿಗೆ ಬೆಂಬಲ ಬೆಲೆ ನೀಡಲು `ಮಹಾ’ ನಿರ್ಧಾರ

ಹಾಲಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯ ಕಾವು ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿತ್ತು. ಇದನ್ನು ಗಮನಿಸಿದ ಮಹಾರಾಷ್ಟ್ರ ಸರ್ಕಾರ ಪ್ರತಿ ಲೀಟರ್​ ಹಾಲಿಗೆ 25 ರೂಪಾಯಿ ನಿಗದಿ ಮಾಡಿದ್ದು, ಇದೇ ಜುಲೈ 21ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಸೋಮವಾರದಿಂದ ರೈತರು ಹಾಲಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಗುರುವಾರ ಮಹಾರಾಷ್ಟ್ರ ಸರ್ಕಾರ, ಅಧಿಕಾರಿಗಳ ಜೊತೆ ಚರ್ಚೆ ನಡೆಸಿತು. ಬಳಿಕವೇ ಈ ತೀರ್ಮಾನ ಕೈಗೊಂಡಿದೆ.

ರೈತರು ಹಾಲಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ವಿಭಿನ್ನವಾಗಿ ಪ್ರತಿಭಟಿಸಿದ್ದರು. ಮುಂಬೈನಲ್ಲಿ ಓರ್ವ ರೈತ ಹಾಲಿನಿಂದ ಸ್ನಾನ ಹಾಗೂ ಜಾನುವಾರುಗಳ ಮೈ ತೊಳೆದ್ರೆ, ಇನ್ನು ಹಲವೆಡೆ ಹಾಲು ರಸ್ತೆ ಪಾಲಾಯಿತು. ಈ ಪ್ರತಿಭಟನೆಯ ಬಿಸಿ ಕರ್ನಾಟಕಕ್ಕೂ ತಟ್ಟಿತ್ತು. ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ಮೂರು ಟ್ಯಾಂಕರ್​ ಹಾಲನ್ನು ಪ್ರತಿಭಟನಾಕಾರರು, ತಡೆದು ರಸ್ತೆಗೆ ಸುರಿದಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...