alex Certify
ಕನ್ನಡ ದುನಿಯಾ       Mobile App
       

Kannada Duniya

2000 ರೂ. ನೋಟ್ : ಕೇಂದ್ರದ ನಡೆ ನಿಗೂಢ

rbi-rajys-be

ನವದೆಹಲಿ: ಮತ್ತೊಂದು ನೋಟ್ ಬ್ಯಾನ್ ಗೆ ಸಿದ್ಧತೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) 2000 ರೂ. ನೋಟ್ ಗಳ ಮುದ್ರಣ ಕಾರ್ಯವನ್ನು ನಿಲ್ಲಿಸಿ, ಹೊಸದಾಗಿ 200 ರೂ. ನೋಟ್ ಮುದ್ರಣಕ್ಕೆ ಚಾಲನೆ ನೀಡಿದೆ ಎಂದು ಹೇಳಲಾಗಿದೆ.

ಆರ್.ಬಿ.ಐ. ಮತ್ತು ಕೇಂದ್ರ ಸರ್ಕಾರ ನಿಗೂಢ ಹೆಜ್ಜೆ ಇಡಲು ಕಾರಣವೇನು? ನೋಟ್ ಬ್ಯಾನ್ ಪಾರ್ಟ್ -2 ಆಗಬಹುದೆ? ಹೀಗೆ ದೇಶದಲ್ಲಿ ಚರ್ಚೆಯಾಗುತ್ತಿದೆ.

ರಾಜ್ಯಸಭೆಯಲ್ಲಿ ಕೂಡ 2000 ನೋಟ್ ಬ್ಯಾನ್ ಕುರಿತಾಗಿ ಚರ್ಚೆಯಾಗಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಹಾಗೂ ಕಾಂಗ್ರೆಸ್ ಸದಸ್ಯ ಗುಲಾಂ ನಬಿ ಆಜಾದ್ ಈ ಕುರಿತು ಪ್ರಶ್ನಿಸಿದ್ದಾರೆ.

3.2 ಲಕ್ಷ ಕೋಟಿ ರೂ ಮೌಲ್ಯದ 2000 ರೂ. ನೋಟ್ ಗಳನ್ನು ಆರ್.ಬಿ.ಐ. ಮುದ್ರಿಸಿದೆ. ಬಳಿಕ ಮುದ್ರಣ ಕಾರ್ಯ ನಿಲ್ಲಿಸಿದೆ. 1000 ರೂ. ಕಾಯಿನ್ ತರುವುದಾಗಿ ಹೇಳಲಾಗ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದಕ್ಕೆ ಹಣಕಾಸು ಸಚಿವರು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯಸಭೆ ಉಪ ಸಭಾಪತಿ ಪಿ.ಜೆ. ಕುರಿಯನ್, 2000 ರೂ. ವಿಚಾರ ಆರ್.ಬಿ.ಐ. ತೀರ್ಮಾನವೇ ಹೊರತು ಕೇಂದ್ರ ಸರ್ಕಾರದ್ದಲ್ಲ ಎಂದು ಹೇಳಿದ್ದಾರೆ.

ಜೇಟ್ಲಿ ಮಾತ್ರ ಮೌನಕ್ಕೆ ಶರಣಾಗಿದ್ದು, ಹಣಕಾಸು ಇಲಾಖೆ ಮತ್ತು ಆರ್.ಬಿ.ಐ. 2000 ರೂ. ನೋಟ್ ವಿಚಾರವಾಗಿ ಗೌಪ್ಯತೆ ಕಾಪಾಡಿಕೊಳ್ಳುತ್ತಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...