alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 15 ನಿಮಿಷಗಳಲ್ಲೇ ಮಂಗಮಾಯವಾಗಿತ್ತು ಎಟಿಎಂ

atm-theftಇತ್ತೀಚೆಗೆ ಎಟಿಎಂ ಕೇಂದ್ರಗಳಿಗೆ ನುಗ್ಗಿ ಯಂತ್ರವನ್ನು ಒಡೆದು ಹಣ ದೋಚುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇಲ್ಲೊಂದು ಕಳ್ಳರ ತಂಡ ತಮ್ಮ ಜೀಪನ್ನು ಎಟಿಎಂ ಕೇಂದ್ರಕ್ಕೆ ತಂದು ಯಂತ್ರವನ್ನೇ ಹೊತ್ತುಕೊಂಡು ಹೋಗಿದೆ.

ಈ ಘಟನೆ ಪಂಜಾಬ್ ನ ಧಾಪಾರ್ ನಿಂದ 20 ಕಿ.ಮೀ. ದೂರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ನಡೆದಿದ್ದು, ಭಾನುವಾರ ಬೆಳಗಿನ ಜಾವ 1-30 ಸುಮಾರಿಗೆ ಜೀಪ್ ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳ ತಂಡ, ತಮ್ಮ ಜೀಪನ್ನು ಎಟಿಎಂ ಕೇಂದ್ರಕ್ಕೆ ಲಗತ್ತಾಗಿ ನಿಲ್ಲಿಸಿಕೊಂಡಿದೆ.

ಕೇವಲ 15 ನಿಮಿಷಗಳಲ್ಲೇ ಫಿಕ್ಸ್ ಮಾಡಿದ್ದ ಎಟಿಎಂ ಯಂತ್ರವನ್ನು ಹೊರ ತೆಗೆದು ಅದನ್ನು ಜೀಪ್ ನಲ್ಲಿ ಹಾಕಿಕೊಂಡು ಪರಾರಿಯಾಗಿದೆ. ಈ ಎಟಿಎಂ ಕೇಂದ್ರದಲ್ಲಿ ಕಾವಲು ಸಿಬ್ಬಂದಿ ಇರಲಿಲ್ಲವೆನ್ನಲಾಗಿದ್ದು, ಅಕ್ಕಪಕ್ಕದವರಿಗೂ ಯಾವುದೇ ಸದ್ದು ಕೇಳಿಸಿಲ್ಲ. ಎಟಿಎಂ ಯಂತ್ರದಲ್ಲಿ 18 ಲಕ್ಷ ರೂ. ಗಳಿತ್ತೆಂದು ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಎಟಿಎಂ ಕೇಂದ್ರದ ನ್ಯೂನ್ಯತೆಗಳ ಮಾಹಿತಿ ಹೊಂದಿರುವವರೇ ಈ ಕೃತ್ಯವೆಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...