alex Certify
ಕನ್ನಡ ದುನಿಯಾ       Mobile App
       

Kannada Duniya

ಹುಷಾರ್…! ಆಹಾರ ಕಲಬೆರಕೆ ಮಾಡಿದ್ರೆ ಜೀವಾವಧಿ ಶಿಕ್ಷೆಯಾಗುತ್ತೆ

ಆಹಾರ ಕಲಬೆರಕೆ ಮಾಡ್ತಾ ಇಷ್ಟು ದಿನ ಭರ್ಜರಿ ಲಾಭ ಮಾಡ್ತಿದ್ದ ಮೋಸಗಾರರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ತಕ್ಕ ಶಾಸ್ತಿ ಮಾಡೋಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕಠಿಣ ಕಾನೂನನ್ನ ಜಾರಿಗೆ ತರೋದಕ್ಕೆ ತೀರ್ಮಾನಿಸಿದೆ.

ಇನ್ಮುಂದೆ ವರ್ತಕರು ಆಹಾರ ಉತ್ಪನ್ನಗಳಲ್ಲಿ ಕಲಬೆರೆಕೆ ಮಾಡಿದ್ದು ಸಾಬೀತಾದ ಪಕ್ಷದಲ್ಲಿ 10 ಲಕ್ಷ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಬೇಕಾಗಲಿದೆ.

2006ರಲ್ಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಆಹಾರ ಉತ್ಪನ್ನಗಳ ಕಲಬೆರಕೆ ವಿಚಾರದಲ್ಲಿ ಕಠಿಣ ಕ್ರಮಗಳನ್ನ ಕೈಗೊಂಡಿತ್ತು. ಕಲಬೆರಕೆ ಮಾಡುವವರಿಗೆ ಎಫ್ಎಸ್ಎಸ್ ಕಾಯ್ದೆಯ 59ನೇ ಅಧಿನಿಯಮದ ಪ್ರಕಾರ 10 ಲಕ್ಷ ದಂಡ ಮತ್ತು 7 ವರ್ಷಗಳ ಜೈಲು ಶಿಕ್ಷೆಯನ್ನ ವಿಧಿಸಬಹುದಾಗಿತ್ತು.

ಈ ನಿಯಮದಲ್ಲಿ ಈಗ ಇನ್ನಷ್ಟು ಮಾರ್ಪಾಡು ತಂದಿದೆ. ಉದ್ದೇಶಪೂರ್ವಕವಾಗಿ ಆಹಾರ ಉತ್ಪನ್ನಗಳಲ್ಲಿ ಕಲಬೆರಕೆ ಮಾಡಿರೋದು ಕಂಡುಬಂದಲ್ಲಿ 10 ಲಕ್ಷ ರೂಪಾಯಿ ದಂಡ ಮತ್ತು ಜೀವಾವಧಿ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಲಿದೆ. ಆಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಕಲಬೆರಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ ತನ್ನ ಕಾನೂನನ್ನ ಇನ್ನಷ್ಟು ಬಿಗಿಗೊಳಿಸುತ್ತಿದೆ. ಅಷ್ಟೇ ಅಲ್ಲ, ರಾಜ್ಯ ಸರ್ಕಾರಗಳಿಂದಲು ಈ ಬಗ್ಗೆ ಅಭಿಪ್ರಾಯವನ್ನ ಕೇಳಿದೆ. ಆಹಾರ ಸುರಕ್ಷತೆಯ ಬಗ್ಗೆ ರಾಜ್ಯಗಳು ಸಾಕಷ್ಟು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...