alex Certify
ಕನ್ನಡ ದುನಿಯಾ       Mobile App
       

Kannada Duniya

ಢಕಾಯಿತರ ಪತ್ತೆಗೆ ಅಮೆರಿಕದ ಸಾಫ್ಟ್ ವೇರ್…!

ಪಂಜಾಬ್ ನಲ್ಲಿ 2 ದಿನಗಳ ಹಿಂದಷ್ಟೆ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ದರೋಡೆಕೋರರು 1.5 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದರು. ಸ್ಯಾಂಟ್ರೋ ಕಾರಿನಲ್ಲಿ ಬಂದಿದ್ದ ನಾಲ್ವರು ಡಕಾಯಿತರು ಈ ಕೃತ್ಯ ಎಸಗಿದ್ದರು. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಆದ್ರೆ ದುಷ್ಕರ್ಮಿಗಳ ಮುಖಚಹರೆ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಕಾರ್ ನಂಬರ್ ಕೂಡ ಸರಿಯಾಗಿ ಕಾಣಿಸುತ್ತಿಲ್ಲ. ಹಾಗಾಗಿ ದುಷ್ಕರ್ಮಿಗಳನ್ನು ಪತ್ತೆ ಮಾಡಲು 900 ಡಾಲರ್ ಕೊಟ್ಟು ಅಮೆರಿಕದಿಂದ ಖರೀದಿ ಮಾಡಿರುವ ಸಾಫ್ಟ್ ವೇರ್ ಅನ್ನು ಪೊಲೀಸರು ಬಳಸಿಕೊಳ್ತಿದ್ದಾರೆ.

ಈ ಸಾಫ್ಟ್ ವೇರ್ ಮೂಲಕ ಬ್ಲರ್ ಆಗಿರೋ ಇಮೇಜ್ ಗಳನ್ನು ಕೂಡ ಸ್ಪಷ್ಟವಾಗಿ ನೋಡಬಹುದು. ಜನವರಿ 9ರಂದು ಸಂಜೆ ಮುಖಕ್ಕೆ ಮಾಸ್ಕ್ ಹಾಕಿಕೊಂಡ ದರೋಡೆಕೋರರು ಅಜಿತ್ ಜೈನ್ ಎಂಬುವವರ ಮನೆಗೆ ನುಗ್ಗಿದ್ದರು. ಅಜಿತ್ ಜೈನ್ ಪತ್ನಿ ರಿತು ಆನ್ ಲೈನ್ ಜ್ಯುವೆಲರಿ ಬ್ಯಿಸನೆಸ್ ನಡೆಸುತ್ತಿದ್ರು.

ಮನೆಯವರನ್ನೆಲ್ಲ ಒತ್ತೆಯಾಗಿಟ್ಟುಕೊಂಡ ದರೋಡೆಕೋರರು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈಗ ಪೊಲೀಸರು ಆ ಕಪ್ಪು ಸ್ಯಾಂಟ್ರೋ ಕಾರಿನ ಹುಡುಕಾಟದಲ್ಲಿದ್ದಾರೆ. ಅದಕ್ಕಾಗಿ ಅಮೆರಿಕದ ಸಾಫ್ಟ್ ವೇರ್ ಬಳಸಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...