alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ದೆಯಲ್ಲಿದ್ದವನಂತೆ ನಟಿಸಿ ಮಹಿಳೆ ಮೇಲೆ ಕೈ ಹಾಕಿದ ಪೇದೆ ಸಸ್ಪೆಂಡ್

ಮುಂಬೈನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ನಡೆದಿದೆ. ರೈಲು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಬೇಕಿದ್ದ ರೈಲ್ವೆ ಸುರಕ್ಷಾ ದಳದ ಪೇದೆಯೊಬ್ಬ ನಿದ್ದೆಗಣ್ಣಿನಲ್ಲಿರುವಂತೆ ನಟಿಸಿ ಮಹಿಳೆ ಮೇಲೆ ಕೈಹಾಕಿದ್ದು, ಈಗ ಸಸ್ಪೆಂಡ್ ಆಗಿದ್ದಾನೆ.

ಮುಂಬೈನ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಜೂನ್ 18 ರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಫ್ಲಾಟ್ ಫಾರಂ ನಾಲ್ಕರ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಆರ್ ಪಿ ಎಫ್ ಪೇದೆ ರಾಜೇಶ್ ಜಹಾಂಗೀರ್ ಎಂಬಾತ ತನ್ನ ಪಕ್ಕ ಕುಳಿತಿದ್ದ ಮಹಿಳೆ ಮೇಲೆ ಕೈ ಹಾಕಿದ್ದಾನೆ.

ನಿದ್ರೆ ಮಾಡುತ್ತಿರುವವನಂತೆ ಈತ ನಟಿಸಿ ಈ ಕೃತ್ಯ ಎಸಗಿದ್ದು, ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಮಹಿಳೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಗಮನಕ್ಕೂ ಪೇದೆಯ ನೀಚ ಕೃತ್ಯ ಗಮನಕ್ಕೆ ಬಂದಿದ್ದು, ಕಪಾಳಕ್ಕೆ ಬಾರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೇದೆ ರಾಜೇಶ್ ಜಹಾಂಗೀರ್ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಸುರಕ್ಷಾ ದಳದ ಹಿರಿಯ ಅಧಿಕಾರಿಗಳು ಆತನನ್ನು ಸಸ್ಪೆಂಡ್ ಮಾಡಿದ್ದು, ತನಿಖೆ ನಡೆಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...