alex Certify
ಕನ್ನಡ ದುನಿಯಾ       Mobile App
       

Kannada Duniya

ಏಮ್ಸ್ ನಿಂದ ಬಿಡುಗಡೆಯಾದ ಗಟ್ಟಿ ಗುಂಡಿಗೆಯ ಚೇತನ್

cheeta_6vv5hci

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ ಸಿಆರ್ಪಿಎಫ್ ಕಮಾಂಡೆಂಟ್ ಚೇತನ್ ಚೀತಾ ಚಿರತೆಯಂತೆ ಎದ್ದು ಬರಲಿದ್ದಾರೆ. ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಚೇತನ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಿ ಸುಮಾರು ಒಂದುವರೆ ತಿಂಗಳು ಕೋಮಾದಲ್ಲಿದ್ದ ಚೇತನ್ ಗೆ ಆಸ್ಪತ್ರೆಯಿಂದ ಬಿಡುಗಡೆ ಸಿಕ್ಕಿದೆ.

ಚೇತನ್ ಬಂಡಿಪುರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಸ್ವಸ್ಥಗೊಂಡಿದ್ದರು. 9 ಗುಂಡುಗಳು ಅವರ ದೇಹ ಹೊಕ್ಕಿದ್ದವು. ಕಣ್ಣು, ತಲೆ ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಗುಂಡು ತಗುಲಿದ್ದರಿಂದ ಚೇತನ್ ಬದುಕಿ ಬರೋ ಸಾಧ್ಯತೆ ಕ್ಷೀಣಿಸಿತ್ತು. ವಿಶೇಷ ವಿಮಾನದಲ್ಲಿ ಚೇತನ್ ರನ್ನು ದೆಹಲಿ ಏಮ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಕೋಮಾದಲ್ಲಿದ್ದ ಚೇತನ್ ಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ಪವಾಡ ರೀತಿಯಲ್ಲಿ ಚೇತನ್ ಬದುಕಿ ಬಂದಿದ್ದು, ಕೆಲಸಕ್ಕೆ ಹಾಜರಾಗುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಚೇತನ್ ಆಸ್ಪತ್ರೆಯಿಂದ ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು  ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಆಸ್ಪತ್ರೆಗೆ ಬಂದು ಚೇತನ್ ಆರೋಗ್ಯ ವಿಚಾರಿಸಿದ್ರು. ಚೇತನ್ ಚೇತರಿಸಿಕೊಳ್ಳುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...