alex Certify
ಕನ್ನಡ ದುನಿಯಾ       Mobile App
       

Kannada Duniya

ಇವಿಎಂ ಕುರಿತು ಮತ್ತೆ ಕೇಳಿ ಬಂದಿದೆ ಅಪಸ್ವರ

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಘಟಕದ (ಡಿಯುಎಸ್‌ಯು) ನಾಯಕನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಮೋಸ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ವಿವಾದ ಹುಟ್ಟು ಹಾಕಿದೆ.

ಈ ಮಧ್ಯೆ, ಕ್ಯಾಂಪಸ್ ಚುನಾವಣೆಗೆ ಇವಿಎಂಗಳನ್ನು ಚುನಾವಣಾ ಆಯೋಗ ನೀಡಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.

ಡಿಯುಎಸ್‌ಯು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿಯ ಗುಂಪು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ ಕಾರ್ಯದರ್ಶಿ ಹುದ್ದೆಯನ್ನು ಪಡೆದಿದೆ.

ಮತ ಎಣಿಕೆ ವೇಳೆ ಮತ ಎಣಿಕೆ ಕೇಂದ್ರದಲ್ಲೇ ಎಬಿವಿಪಿ ಹಾಗೂ ಎನ್‌ಎಸ್‌ಯುಐ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿತ್ತು. ಹಲವು ಮತಯಂತ್ರಗಳು ದೋಷಪೂರಿತಗೊಂಡಿದ್ದವು. ಹೀಗಾಗಿ ಎಣಿಕೆಯನ್ನೂ ತುಸು ಹೊತ್ತು ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಸಮಿತಿಯ ಹೇಳಿಕೆ ಹೊರಬಿದ್ದಿದ್ದು, ಇಲ್ಲಿ ಬಳಸಲಾದ ಮತಯಂತ್ರಗಳನ್ನು ಚುನಾವಣಾ ಆಯೋಗ ನೀಡಿಲ್ಲ. ದೆಹಲಿ ಯುನಿವರ್ಸಿಟಿ ಖಾಸಗಿಯಾಗಿ ಯಂತ್ರಗಳನ್ನು ಖರೀದಿಸಿರಬಹುದು ಎಂಬ ಸ್ಪಷ್ಟನೆ ನೀಡಿದೆ.

7 ಇವಿಎಂಗಳ ಡಾಟಾ ನಾಪತ್ತೆಯಾಗಿದೆ ಎಂದು ಹೇಳುವ ಮೂಲಕ ವಂಚನೆಯ ಗಂಭೀರ ಆರೋಪ ಮಾಡಿರುವ ಎನ್‌ಎಸ್‌ಯುಐ, ಚುನಾವಣಾ ಆಯೋಗಕ್ಕೆ ವಿಸ್ತೃತ ವರದಿ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...