alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯಾಯಾಲಯದ ತೀರ್ಪಿನಿಂದ ನಟಿ ರೋಜಾಗೆ ಸಿಕ್ತು ಬಿಗ್ ರಿಲೀಫ್

Roja mla

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ಹಾಗೂ ನಟಿ ರೋಜಾಗೆ ಹೈದರಾಬಾದ್ ಹೈಕೋರ್ಟ್ ನೀಡಿದ ತೀರ್ಪು ಬಿಗ್ ರಿಲೀಫ್ ನೀಡಿದೆ. ರೋಜಾ, ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸದ್ಯಕ್ಕೆ ಯಾವುದೇ ಅಡೆತಡೆಗಳಿಲ್ಲ.

ಮುಖ್ಯಮಂತ್ರಿ ವಿರುದ್ದ ಅಸಭ್ಯ ಪದ ಬಳಸಿದರೆಂಬ ಕಾರಣಕ್ಕಾಗಿ ರೋಜಾ ಅವರನ್ನು ವಿಧಾನಸಭಾ ಸ್ಪೀಕರ್ ಸದನದಿಂದ ಅಮಾನತುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ರೋಜಾ, ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತಾಗಿನ ಮಧ್ಯಂತರ ತೀರ್ಪು ಇಂದು ಹೊರ ಬಿದ್ದಿದೆ.

ಸ್ಪೀಕರ್ ಮಾಡಿದ್ದ ಅಮಾನತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದರಿಂದಾಗಿ ರೋಜಾ ಅವರು ಬಜೆಟ್ ಅಧಿವೇಶನದಲ್ಲಿ ನಿರಾಂತಕವಾಗಿ ಪಾಲ್ಗೊಳ್ಳಬಹುದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರೋಜಾ, ನ್ಯಾಯಾಂಗದ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದ್ದು, ಇದು ಸತ್ಯಕ್ಕೆ ಸಂದ ಜಯ ಎಂದಿದ್ದಾರೆ. ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...