alex Certify
ಕನ್ನಡ ದುನಿಯಾ       Mobile App
       

Kannada Duniya

ಆಡಳಿತ ಪಕ್ಷದ ನಿದ್ದೆಗೆಡಿಸಿದ ನಟಿ

ysr-roja

ಹೈದರಾಬಾದ್: ಹಿಂದೆ ಸಿನಿರಸಿಕರ ಮನ ಗೆದ್ದಿದ್ದ ಖ್ಯಾತ ನಟಿ ರೋಜಾ, ಈಗ ಆಡಳಿತ ಪಕ್ಷದ ನಿದ್ದೆಯನ್ನು ಕೆಡಿಸಿದ್ದಾರೆ.

ಆಂಧ್ರಪ್ರದೇಶದ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿಯ ಫೈರ್ ಬ್ರಾಂಡ್ ಖ್ಯಾತಿಯ ಶಾಸಕಿಯಾಗಿರುವ ರೋಜಾ ವಿಧಾನಸಭೆಯಲ್ಲಿ ಮಾತಿಗೆ ನಿಂತರೆ, ಆಡಳಿತ ಪಕ್ಷದವರು ತಲೆ ಕೆಡಿಸಿಕೊಳ್ಳುತ್ತಾರೆ.

ಸದನದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಆಡಳಿತ ಪಕ್ಷದ ಶಾಸಕಿ ಅನಿತಾ ಅವರ ವಿರುದ್ಧ ರೋಜಾ, ಅವಾಚ್ಯ ಪದಗಳನ್ನು ಬಳಸಿದ್ದಕ್ಕೆ ಸ್ಪೀಕರ್ 1 ವರ್ಷ ಅಮಾನತು ಮಾಡಿದ್ದರು.

ಅಮಾನತು ಅವಧಿ ಮುಗಿಯುತ್ತಾ ಬಂದಿದ್ದು, ರೋಜಾ ಮತ್ತೆ ಗುಡುಗಲು ಸಜ್ಜಾಗಿದ್ದಾರೆ. ಆದರೆ, ಆಡಳಿತ ಪಕ್ಷದ ನಾಯಕರಿಗೆ ರೋಜಾ ತಲೆನೋವಾಗಿದ್ದಾರೆ.

ಅವರನ್ನು ಮತ್ತೆ ಅಮಾನತು ಮಾಡಲು ತಂತ್ರ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಮತ್ತೊಂದು ವರ್ಷ ಅಮಾನತು ಮಾಡಿದರೆ, ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಮತ್ತು ರೋಜಾ ಅವರ ನಡೆ ಯಾವ ರೀತಿ ಇರುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...