alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಪ್ರಯಾಣಿಕರನ್ನು ದೋಚಿದವರು ಕಳ್ಳರಲ್ಲ, ರೈಲ್ವೆ ಸಿಬ್ಬಂದಿ..?

india-rajdhani-train

ಅಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ರೈಲ್ವೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. 7 ಮಂದಿ ಬೋಗಿ ಅಟೆಂಡೆಂಟ್ ಗಳು ಹಾಗೂ 7 ಮಂದಿ ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ಅವರನ್ನು ವಿಚಾರಣೆಗೂ ಒಳಪಡಿಸಲಾಗಿದೆ.

15 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲು ದೆಹಲಿಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅಧಿಕಾರಿಗಳನ್ನು ಕೋಟಾ ಹಾಗೂ ರಟ್ಲಮ್ ಗೆ ಕಳುಹಿಸಲಾಗಿದೆ. ಆಗಸ್ಟ್ 15ರಂದು ರಾತ್ರಿ ಸುಮಾರು 25 ಪ್ರಯಾಣಿಕರನ್ನು ದೋಚಲಾಗಿತ್ತು.

ರೈಲ್ವೆ ಸಿಬ್ಬಂದಿಯೇ ಮತ್ತು ಬರಿಸುವ ಸ್ಪ್ರೇಯನ್ನು ಪ್ರಯಾಣಿಕರ ಮೇಲೆ ಸಿಂಪಡಿಸಿ ಈ ಕೃತ್ಯ ಎಸಗಿದ್ದಾರೆಂಬ ಅನುಮಾನ ಮೂಡಿದೆ. ಕಳವಾಗಿದ್ದ ಮಹಿಳೆಯರ ಪರ್ಸ್ ಗಳು ಡಸ್ಟ್ ಬಿನ್, ಕಿಚನ್ ಹಾಗೂ ರೈಲಿನ ಟಾಯ್ಲೆಟ್ ನಲ್ಲಿ ಪತ್ತೆಯಾಗಿದ್ದವು. ರೈಲಿನ ಕಿಚನ್ ಗೆ ಸಿಬ್ಬಂದಿ ಬಿಟ್ರೆ ಬೇರೆ ಯಾರಿಗೂ ಪ್ರವೇಶವಿಲ್ಲ.

ಹಾಗಾಗಿ ಸಿಬ್ಬಂದಿಯೇ ಕಳವು ಮಾಡಿರಬಹುದೆಂಬ ಅನುಮಾನ ದಟ್ಟವಾಗಿದೆ. ಮೊಬೈಲ್, ವಜ್ರದ ಆಭರಣ, ನಗದು, ಎಲೆಕ್ಟ್ರಾನಿಕ್ ಡಿವೈಸ್ ಸೇರಿದಂತೆ ಸುಮಾರು 15 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. ಎ.ಕೆ.ಮಹಾಜನ್ ಎಂಬಾತನ 70,000 ನಗದು ಹಾಗೂ ಅವರ ಪತ್ನಿಯ ಎರಡು ಐಫೋನ್ ಕೂಡ ಕಳ್ಳರ ಪಾಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...