alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ದರೋಡೆಕೋರರ ಕೃತ್ಯ

ಮುಂಬೈ: ನವೀ ಮುಂಬೈನಲ್ಲಿ ದರೋಡೆಕೋರರು ಸುರಂಗ ಕೊರೆದು ಬ್ಯಾಂಕ್ ನಲ್ಲಿದ್ದ 27 ಲಾಕರ್ ಗಳನ್ನು ಲೂಟಿ ಮಾಡಿದ್ದಾರೆ.

ಜುನಾಗರ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಲಾಕರ್ ಗಳನ್ನು ಒಡೆದು ಅಪಾರ ಪ್ರಮಾಣದ ನಗದು, ಚಿನ್ನಾಭರಣ ಲೂಟಿ ಮಾಡಲಾಗಿದೆ. ಪಕ್ಕದ ಅಂಗಡಿಯಿಂದ ಕನ್ನ ಕೊರೆದು ಲಾಕರ್ ಗಳನ್ನು ದೋಚಲಾಗಿದ್ದು, ದರೋಡೆಕೋರರ ಕೃತ್ಯಕ್ಕೆ ಬ್ಯಾಂಕ್ ಅಧಿಕಾರಿಗಳು, ಗ್ರಾಹಕರು ದಂಗಾಗಿ ಹೋಗಿದ್ದಾರೆ.

ಶನಿವಾರ ಮತ್ತು ಭಾನುವಾರ ಬ್ಯಾಂಕ್ ಗೆ ರಜೆ ಇದ್ದ ಕಾರಣ ಇದು ಯಾರ ಗಮನಕ್ಕೂ ಬಂದಿಲ್ಲ. ಪಕ್ಕದ ಅಂಗಡಿಯ ಮೂಲಕ ಸುರಂಗ ಮಾಡಿಕೊಂಡು ಕಳ್ಳರು ಬ್ಯಾಂಕ್ ಗೆ ಪ್ರವೇಶ ಪಡೆದು, 27 ಲಾಕರ್ ಗಳನ್ನು ದೋಚಿದ್ದಾರೆ.

ಸೋಮವಾರ ಗ್ರಾಹಕರು, ಬ್ಯಾಂಕ್ ಅಧಿಕಾರಿಗಳು ಲಾಕರ್ ಇದ್ದ ಕೊಠಡಿಗೆ ಹೋದಾಗ 27 ಲಾಕರ್ ಗಳನ್ನು ಒಡೆದಿರುವುದು ಗಮನಕ್ಕೆ ಬಂದಿದೆ. ಕೊಠಡಿಯಲ್ಲಿದ್ದ ಸುರಂಗ ಪಕ್ಕದ ಅಂಗಡಿಗೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಯಾನ್ಪದಾ ಪೊಲೀಸರು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...