alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆಗೆ ಬಂದವರು ಮಾಡಿದ್ರು ನಂಬಲಾಗದ ಕೆಲ್ಸ

Robbers Attack A Family At Night, Then Put Aloe Vera On The Father's Wounds Before Escaping!ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ದರೋಡೆ ಮಾಡಲೆಂದು ಮನೆಯೊಂದಕ್ಕೆ ನುಗ್ಗಿದ ಆರು ಮಂದಿ ದರೋಡೆಕೋರರ ತಂಡ ಮನೆ ಮಾಲೀಕನಿಗೆ ಮಾರಕಾಯುಧಗಳಿಂದ ಥಳಿಸಿದ್ದು, ಹೊರಡುವ ವೇಳೆ ಯಾರೂ ಊಹಿಸಲಾಗದ ಕೆಲಸ ಮಾಡಿದ್ದಾರೆ.

ಸಂಜೀತ್ ಸಿಂಗ್ ಎಂಬಾತ ಬ್ಯಾಂಕ್ ನಿಂದ 6 ಲಕ್ಷ ರೂಪಾಯಿ ಲೋನ್ ತೆಗೆದುಕೊಂಡಿದ್ದಾನೆಂಬ ಮಾಹಿತಿ ಹೊಂದಿದ್ದ ದರೋಡೆಕೋರರ ತಂಡ, ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದೆ. ಸಂಜೀತ್ ಸಿಂಗ್, ಮತ್ತವನ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಮನೆಯಲ್ಲಿದ್ದು, ಸಂಜೀತ್ ಸಿಂಗ್ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿ ಆರು ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದೆ.

ಆದರೆ ವಾಸ್ತವವಾಗಿ ಸಂಜೀತ್ ಸಿಂಗ್ 60 ಸಾವಿರ ರೂಪಾಯಿಗೆ ಲೋನ್ ಮಾಡಿಸಿದ್ದು, ಈ ಪೈಕಿ ಕೇವಲ 10 ಸಾವಿರ ರೂ. ಮಾತ್ರ ಡ್ರಾ ಮಾಡಿದ್ದಾನೆ. ಇದನ್ನು ಒಪ್ಪಲು ತಯಾರಿರದ ದರೋಡೆಕೋರರ ತಂಡ ಮತ್ತೆ ಹಲ್ಲೆ ಮಾಡಿದೆ. ಕೊನೆಗೆ ಬ್ಯಾಂಕ್ ಸಾಲದ ದಾಖಲೆಗಳನ್ನು ತೋರಿಸಿದ ಮೇಲೆ ದರೋಡೆಕೋರರ ತಂಡಕ್ಕೆ ತಮಗೆ ತಪ್ಪು ಮಾಹಿತಿ ಸಿಕ್ಕಿರುವುದರ ಅರಿವಾಗಿದೆ. ಅಲ್ಲದೇ ಸಂಜೀತ್ ಸಿಂಗ್ ಬ್ಯಾಂಕ್ ಸಾಲದ ಹಣದಲ್ಲಿ ಡ್ರಾ ಮಾಡಿದ್ದ 10 ಸಾವಿರ ರೂ. ಪೈಕಿ 2 ಸಾವಿರ ರೂ. ಗಳನ್ನು ಈಗಾಗಲೇ ಖರ್ಚು ಮಾಡಿರುವ ವಿಷಯವೂ ಗೊತ್ತಾಗಿದೆ.

ಅದು ಸಿಕ್ಕಿದ್ದೇ ಲಾಭ ಎಂದುಕೊಂಡ ದರೋಡೆಕೋರರು ಎಂಟು ಸಾವಿರ ರೂ. ಹಾಗೂ ಕೆಲ ಆಭರಣಗಳನ್ನು ತೆಗೆದುಕೊಂಡಿದ್ದಾರೆ. ಪರಾರಿಯಾಗುವ ಮುನ್ನ ದರೋಡೆಕೋರರಿಗೆ ಪಶ್ಚಾತಾಪವಾಯಿತೋ ಏನೋ ಅವರುಗಳ ಪೈಕಿ ಇಬ್ಬರು ಹೊರಗಡೆ ಹೋಗಿ ಆ ಕತ್ತಲಿನಲ್ಲೂ ಅಲೋವೆರಾ ಎಲೆಗಳನ್ನು ತಂದಿದ್ದಾರೆ. ಕುಡುಗೋಲಿನಿಂದ ತಾವು ಹೊಡೆದಿದ್ದ ಪರಿಣಾಮ ಗಾಯಗೊಂಡಿದ್ದ ಸಂಜೀತ್ ಸಿಂಗ್ ನ ಗಾಯಗಳನ್ನು ನೀರಿನಿಂದ ತೊಳೆದು ಅಲೋವೆರಾದ ಎಲೆಗಳನ್ನು ಜಜ್ಜಿ ಅದರ ರಸ ಹಚ್ಚಿದ್ದಾರೆ. ಅಲ್ಲದೇ ರಕ್ತ ಸುರಿಯುತ್ತಿದ್ದ ಆತನ ತಲೆಗೆ ಬ್ಯಾಂಡೇಜ್ ಕಟ್ಟಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಜೀತ್ ಸಿಂಗ್ ನ ಪತ್ನಿ ಅಂಜನಾ, ಅವರುಗಳು ನಮ್ಮೆಲ್ಲರನ್ನು ಕೊಲೆ ಮಾಡಬೇಕೆಂಬ ಉದ್ದೇಶ ಹೊಂದಿದ್ದರು. ಕಡೆಗೆ ನಮ್ಮ ಪರಿಸ್ಥಿತಿ ನೋಡಿ ಬಿಟ್ಟು ಹೋದರು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...