alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ATM ನಲ್ಲಿ ನಡೆದ ಕೃತ್ಯ

ಗೋವಾದ ಪಣಜಿಯಲ್ಲಿ ದರೋಡೆಕೋರನೊಬ್ಬ ಎಟಿಎಂ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ. ಹ್ಯಾಮರ್ ನಿಂದ ಆತನ ತಲೆಗೆ ಹೊಡೆದಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ದರೋಡೆಕೋರ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂಗೆ ನುಗ್ಗಿದ್ದ. ಎಟಿಎಂ ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ಬಳಿ ಯಾವುದೇ ಆಯುಧ ಇರಲಿಲ್ಲ. ಬರಿಗೈನಲ್ಲೇ ಆತ ದರೋಡೆಕೋರನನ್ನು ಹಿಡಿಯಲು ಮುನ್ನುಗ್ಗಿದ್ದಾನೆ. ಈ ವೇಳೆ ದುಷ್ಕರ್ಮಿ ಆತನ ತಲೆಗೆ ಮೂರ್ನಾಲ್ಕು ಬಾರಿ ಹ್ಯಾಮರ್ ನಿಂದ ಹೊಡೆದಿದ್ದಾನೆ.

ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಕುಸಿದು ಬಿದ್ದಿದ್ದ. ಆದ್ರೂ ಸುಮ್ಮನಾಗದ ದರೋಡೆಕೋರ ಹಲ್ಲೆ ಮುಂದುವರಿಸಿದ್ದಾನೆ. ಗಾರ್ಡ್ ತಲೆ ಒಡೆದು ರಕ್ತ ಬರಲು ಶುರುವಾಗ್ತಿದ್ದಂತೆ ಅಲ್ಲಿಂದ ಓಡಿ ಹೋಗಿದ್ದಾನೆ. ಗಾಯಗೊಂಡಿದ್ದ ಭದ್ರತಾ ಸಿಬ್ಬಂದಿ ಕಷ್ಟಪಟ್ಟು ಆ ಹ್ಯಾಮರ್ ಹಿಡಿದು ದರೋಡೆಕೋರನನ್ನು ಹಿಡಿಯಲು ಹೋಗಿರುವ ದೃಶ್ಯ ಕೂಡ ರೆಕಾರ್ಡ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...