alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ತಿಂಗಳಲ್ಲಿ 27 ಯುವಕರನ್ನು ಲೂಟಿ ಮಾಡಿದ್ರು ಚಾಲಾಕಿ ಹುಡುಗಿಯರು

ಘಾಜಿಯಾಬಾದ್ ನಲ್ಲಿ ದರೋಡೆ ವಧುಗಳ ಗ್ಯಾಂಗ್ ಸಕ್ರಿಯವಾಗಿದೆ. ಕಳೆದ ಮೂರು ತಿಂಗಳಲ್ಲಿ ಯುವತಿಯರು ತಮ್ಮ ಗ್ಯಾಂಗ್ ಜೊತೆ ಸೇರಿ 27 ಯುವಕರಿಗೆ ಮೋಸ ಮಾಡಿದ್ದಾರೆ. ಯಾವುದೋ ಕಾರಣಕ್ಕೆ ಮದುವೆಯಾಗದ ಯುವಕರನ್ನು ಜಾಲಕ್ಕೆ ಬೀಳಿಸಿ ಮದುವೆಯಾಗುವ ಹುಡುಗಿಯರು ಕೆಲ ದಿನಗಳಲ್ಲಿಯೇ ಆಭರಣ, ನಗದು ಸಮೇತ ನಾಪತ್ತೆಯಾಗ್ತಿದ್ದಾರೆ.

ಶನಿವಾರ ಮೂರು ಯುವಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೇರೆ ಬೇರೆ ಠಾಣೆಯಲ್ಲಿ ಈವರೆಗೆ 27 ದೂರು ದಾಖಲಾಗಿದೆ. ಮದುವೆಯಾಗಿ ನಾಲ್ಕು ತಿಂಗಳಿಗೆ ಮನೆಯಲ್ಲಿದ್ದ ಬಂಗಾರ, ನಗದನ್ನು ದೋಚಿ ವಧುವೊಬ್ಬಳು ನಾಪತ್ತೆಯಾದ್ರೆ ಇನ್ನೊಬ್ಬಳು ಇಡೀ ಮನೆ ಖಾಲಿ ಮಾಡಿ ಹೋಗಿದ್ದಾಳೆ. ಮನೆಯಲ್ಲಿದ್ದ ಎಸಿ, ಫ್ಯಾನ್ ನಿಂದ ಹಿಡಿದು ಎಲ್ಲವನ್ನೂ ದೋಚಿದ್ದಾಳೆ. ಮೋಸ ಹೋದವರ ಪತ್ನಿಯಂದಿರು ಫೋನ್ ಸಂಪರ್ಕಕ್ಕೆ ಸಿಗ್ತಿಲ್ಲವಂತೆ.

ಸಾಮಾನ್ಯವಾಗಿ ದೆಹಲಿ-ಎನ್ಸಿಆರ್ ಸುತ್ತಮುತ್ತ ವಾಸವಾಗಿರುವ ಹುಡುಗ್ರನ್ನೇ ಈ ಹುಡುಗಿಯರು ಆಯ್ಕೆ ಮಾಡಿಕೊಳ್ತಾರೆ. ಮನೆ ಬಿಟ್ಟು ಕೆಲಸಕ್ಕೆ ಬಂದಿರುವ ಯುವಕರ ಸಂಖ್ಯೆ ಇಲ್ಲಿ ಹೆಚ್ಚಿದೆ. ಕೆಲಸ, ಮನೆ ಒತ್ತಡದಲ್ಲಿ ಯುವಕರು ಮದುವೆಯಾಗಿರುವುದಿಲ್ಲ. ಅಂಥವರನ್ನು ಸುಲಭವಾಗಿ ಬಲೆಗೆ ಬೀಳಿಸಿಕೊಳ್ಳುವ ಟ್ರಿಕ್ ಈ ಮೋಸಗಾರ್ತಿಯರಿಗೆ ಗೊತ್ತು ಎನ್ನುತ್ತಾರೆ ಪೊಲೀಸರು. ಎಲ್ಲ ಪ್ರಕರಣ ವಿಚಾರಣೆ ನಡೆಯುತ್ತಿದೆ. ಕೆಲ ಹುಡುಗಿಯರ ಫೋನ್ ನಂಬರ್ ಟ್ರೇಸ್ ಆಗಿದ್ದು, ಶೀಘ್ರದಲ್ಲಿಯೇ ಬಂಧಿಸುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...