alex Certify
ಕನ್ನಡ ದುನಿಯಾ       Mobile App
       

Kannada Duniya

‘ರೋಡ್ ರೋಮಿಯೋ’ ಗೆ ವಿದ್ಯಾರ್ಥಿನಿ ಕೊಟ್ಳು ಚಪ್ಪಲಿ ಏಟು

458376-romeo-viral

ಅಲಹಾಬಾದ್: ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರನ್ನು ಚುಡಾಯಿಸುವುದನ್ನೇ ಕೆಲವರು ಕಾಯಕ ಮಾಡಿಕೊಂಡಿರುತ್ತಾರೆ. ಕೆಲವು ಹುಡುಗಿಯರು ಇದಕ್ಕೆ ಪ್ರತಿಕ್ರಿಯೆ ನೀಡದೆ ತಲೆ ತಗ್ಗಿಸಿಕೊಂಡು ಹೋದರೆ ದಿಟ್ಟ ಯುವತಿಯರು ಮಾತ್ರ ಮರೆಯಲಾಗದ ಪಾಠ ಕಲಿಸುತ್ತಾರೆ.

ಅಂತವುದೇ ಒಂದು ಪ್ರಕರಣ ಈಗ ನಡೆದಿದೆ. ಧೈರ್ಯವಂತ ವಿದ್ಯಾರ್ಥಿನಿಯೊಬ್ಬಳು ಪ್ರತಿ ನಿತ್ಯ ಅಶ್ಲೀಲವಾಗಿ ಚುಡಾಯಿಸುತ್ತಿದ್ದವನಿಗೆ ಸಾರ್ವಜನಿಕವಾಗಿಯೇ ತಕ್ಕ ಪಾಠ ಕಲಿಸಿದ್ದಾಳೆ. ಅಲಹಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಶಾಲೆಗೆ ತನ್ನ ಸ್ನೇಹಿತೆಯರೊಂದಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರತಿ ನಿತ್ಯವೂ ಯುವಕನೊಬ್ಬ ಅಶ್ಲೀಲವಾಗಿ ಚುಡಾಯಿಸುತ್ತಿದ್ದ.

ಈತನ ಕಾಟಕ್ಕೆ ರೋಸತ್ತ ವಿದ್ಯಾರ್ಥಿನಿ ಬುದ್ದಿ ಕಲಿಸಲು ನಿರ್ಧರಿಸಿದ್ದು, ಇತ್ತೀಚೆಗೆ ಆತನಿಗೆ ಸಾರ್ವಜನಿಕವಾಗಿಯೇ ಚಪ್ಪಲಿಯಲ್ಲಿ ಬಾರಿಸಿದ್ದಾಳೆ. ನೆರೆದ ಸಾರ್ವಜನಿಕರೂ ವಿದ್ಯಾರ್ಥಿನಿಯ ಬೆಂಬಲಕ್ಕೆ ನಿಂತಿದ್ದು, ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಅದೀಗ ವೈರಲ್ ಆಗಿದ್ದು, ಆನೇಕ ಮಂದಿ ಶೇರ್ ಮಾಡಿ ವಿದ್ಯಾರ್ಥಿನಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...