alex Certify
ಕನ್ನಡ ದುನಿಯಾ       Mobile App
       

Kannada Duniya

22 ಲಕ್ಷದ ಬೈಕ್, 16 ಸಾವಿರದ ಹೆಲ್ಮೆಟ್ ಕೂಡ ಪ್ರಾಣ ಉಳಿಸಲಿಲ್ಲ

ಜೈಪುರದಲ್ಲಿ ಗುರುವಾರ ರಾತ್ರಿ ರೋಹಿತ್ ಸಿಂಗ್ ಶೆಖಾವತ್ ನನ್ನು ಆತನ 22 ಲಕ್ಷದ ಬೈಕ್ ಆಗ್ಲಿ, 16 ಸಾವಿರ ರೂಪಾಯಿ ಬೆಲೆಯ ಹೆಲ್ಮೆಟ್ ಆಗ್ಲಿ, 30 ಸಾವಿರ ರೂಪಾಯಿಯ ಗೇರ್ ಆಗ್ಲಿ ರಕ್ಷಿಸಲು ಸಾಧ್ಯವಾಗಲಿಲ್ಲ. ಆತನ ಹೆಲ್ಮೆಟ್ ಆತನ ಪ್ರಾಣ ತೆಗೆದಿದೆ ಎಂದು ವೈದ್ಯರು ಹೇಳಿದ್ದಾರೆ.

ರೋಹಿತ್ ಗುರುವಾರ ರಾತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಅಪಘಾತ ನಡೆದ ವೇಳೆ ಆತನ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ. ಆದ್ರೆ ಹೆಲ್ಮೆಟ್ ತೆಗೆಯಲು ಸಾಧ್ಯವಾಗಲಿಲ್ಲ. ಮೂಗು ಹಾಗೂ ಬಾಯಿಯಿಂದ ರಕ್ತ ಹೊರ ಬರುತ್ತಿತ್ತು. ಆದ್ರೆ ಹೆಲ್ಮೆಟ್ ತೆಗೆಯಲು ಸಾಧ್ಯವಾಗದ ಕಾರಣ ಶ್ವಾಸಕೋಶದಲ್ಲಿಯೇ ರಕ್ತ ಹೆಪ್ಪುಗಟ್ಟಿದೆ. ಹೆಲ್ಮೆಟ್ ಸಮೇತ ರೋಹಿತ್ ನನ್ನು ಆಸ್ಪತ್ರೆಗೆ ಕರೆ ತರಲಾಗಿದೆ.

ವೈದ್ಯರು ಹೆಲ್ಮೆಟ್ ಬೆಲ್ಟ್ ಕಟ್ ಮಾಡಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸಲಿಲ್ಲ. ಎಜಿವಿ3 ಸರಣಿಯ ಈ ಹೆಲ್ಮೆಟ್ ಬೆಲೆ 250 ಡಾಲರ್. ಅಂದ್ರೆ ಸುಮಾರು 16 ಸಾವಿರ ರೂಪಾಯಿ. ಜಾಗ್ವಾರ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ರೋಹಿತ್ ಕೆಲ ದಿನಗಳ ಹಿಂದಷ್ಟೇ 22 ಲಕ್ಷದ ಬೈಕ್ ಖರೀದಿ ಮಾಡಿದ್ದ. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ರೋಹಿತ್ ಗೆ ಒಂದುವರೆ ವರ್ಷದ ಮಗನಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...