alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ದಾಖಲೆ ಬರೆಯಲಿದೆ ಆರ್.ಕೆ. ನಗರ ಉಪ ಚುನಾವಣೆ

election-commission-759

ತಮಿಳುನಾಡಿನ ಆರ್ ಕೆ ನಗರ ಉಪಚುನಾವಣೆಯಲ್ಲಿ ಹೊಸದೊಂದು ದಾಖಲೆ ಮಾಡಲು ಚುನಾವಣಾ ಆಯೋಗ ಸಜ್ಜಾಗಿದೆ. ಏಪ್ರಿಲ್ 12ರಂದು ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ದಾಖಲೆಯ ಸಂಖ್ಯೆಯಲ್ಲಿ ವೀಕ್ಷಕರನ್ನು ನೇಮಕ ಮಾಡಲಾಗ್ತಿದೆ. ಒಂದು ಕ್ಷೇತ್ರದ ಎಲೆಕ್ಷನ್ ಗಾಗಿ ಐವರು ವೀಕ್ಷಕರನ್ನು ನೇಮಕ ಮಾಡ್ತಿರೋದು ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ.

ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಅವರೊಂದಿಗೆ ಉನ್ನತ ಮಟ್ಟದ ಸಭೆ ಬಳಿಕ ಸರ್ಕಾರ ಈ ವಿಷಯ ತಿಳಿಸಿದೆ. ಮತದಾರರಿಗೆ ನೋಟು ಹಂಚಲಾಗ್ತಿದೆ ಅಂತಾ ಡಿಎಂಕೆ ಹಾಗೂ ಸಿಪಿಐಎಂ ಪಕ್ಷಗಳು ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ಮೇಲೆ ಕಣ್ಣಿಡಲು ಇಬ್ಬರು ವೀಕ್ಷಕರನ್ನು ಚುನಾವಣಾ ಆಯೋಗ ನೇಮಕ ಮಾಡಿತ್ತು.

12 ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಕ್ಷೇತ್ರದಲ್ಲಿ ಇಬ್ಬರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಕೂಡ ರಾತ್ರಿ ಗಸ್ತು ತಿರುಗಲು ನೇಮಿಸಲಾಗಿದೆ. ಎಲ್ಲಾ 256 ಮತಕೇಂದ್ರಗಳಲ್ಲಿ ಸೂಕ್ಷ ವೀಕ್ಷಕರನ್ನು ನೇಮಿಸಲಾಗಿದೆ. ಭದ್ರತೆಯಾಗಿ ಸಿ ಆರ್ ಪಿ ಎಫ್ ಯೋಧರನ್ನು ನಿಯೋಜನೆ ಮಾಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...