alex Certify
ಕನ್ನಡ ದುನಿಯಾ       Mobile App
       

Kannada Duniya

ಮತಯಂತ್ರಗಳಿಗೆ ಹಾನಿ, ಮಾಜಿ ಸಚಿವರ ಮೇಲೆ ದಾಳಿ

ಚೆನ್ನೈ: ಚೆನ್ನೈ ಆರ್.ಕೆ. ನಗರ ಉಪ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ದಿನಕರನ್ ಬೆಂಬಲಿಗರು ಮತ್ತು ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ದಿನಕರನ್ ಭರ್ಜರಿ ಮುನ್ನಡೆ ಗಳಿಸಿದ್ದು, ಮತಯಂತ್ರವೊಂದರಲ್ಲಿ ಅವರಿಗೆ ಅತಿ ಹೆಚ್ಚಿನ ಮತಗಳು ಲಭಿಸಿದ ಹಿನ್ನಲೆಯಲ್ಲಿ ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ.

ಮತ ಎಣಿಕೆಯಲ್ಲಿ ನಿರತರಾಗಿದ್ದ ಅಧಿಕಾರಿಗಳು, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, 3 ಮತಯಂತ್ರಗಳನ್ನು ಒಡೆದು ಹಾಕಿದ್ದಾರೆ. ಎಣಿಕೆ ಕೇಂದ್ರದಲ್ಲಿ ಚೇರ್ ಗಳನ್ನು ತೂರಿ, ದಾಖಲೆಗಳನ್ನು ಹರಿದು ಹಾಕಿದ್ದಾರೆ. ಹಲವು ವಸ್ತುಗಳಿಗೆ ಹಾನಿ ಮಾಡಿದ್ದಾರೆ. ದಿನಕರನ್ ಅವರ ಏಜೆಂಟ್ ಆಗಿ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಲಾಗಿದೆ.

ಇದರಿಂದಾಗಿ ಎಣಿಕೆ ಕೇಂದ್ರದಲ್ಲಿ ಗೊಂದಲವಾಗಿ ಕೆಲಕಾಲ ಮತ ಎಣಿಕೆಯನ್ನು ಸ್ಥಗಿತಗೊಳಿಸಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ಎಣಿಕೆ ಆರಂಭಿಸಲಾಗಿದೆ. ಪ್ಯಾರಾ ಮಿಲಿಟರಿ ಪಡೆ, ಶಶ್ತ್ರಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು, ಬಿಗಿ ಭದ್ರತೆಯೊಂದಿಗೆ ಮತ ಎಣಿಕೆ ಮುಂದುವರೆಸಲಾಗಿದೆ. ಎಣಿಕೆ ಕೇಂದ್ರದಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

TTV Dinakaran (Independent): 7,276
E Madhusudhanan (AIADMK): 2,737
N Maruthu Ganesh (DMK): 1,181
K Nagarajan (BJP): 66
NOTA: 102

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...