alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕರನ್ ಮುನ್ನಡೆ, ಘರ್ಷಣೆಯಿಂದ ಮತ ಎಣಿಕೆ ಸ್ಥಗಿತ

ಚೆನ್ನೈ: ಆರ್.ಕೆ. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭದಲ್ಲಿ ಬಿರುಸಿನಿಂದ ಸಾಗಿದೆ.

ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಶಶಿಕಲಾ ಬಣದ ಪಕ್ಷೇತರ ಅಭ್ಯರ್ಥಿ ಟಿ.ಟಿ.ವಿ. ದಿನಕರನ್ 6200 ಮತಗಳ ಮುನ್ನಡೆ ಸಾಧಿಸಿದ್ದಾರೆ. ದಿನಕರನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಎ.ಐ.ಡಿ.ಎಂ.ಕೆ. ಕಚೇರಿ ಜನರಿಲ್ಲದೇ ಬಣಗುಡುತ್ತಿದೆ.

ಟಿ.ಟಿ.ವಿ. ದಿನಕರನ್ ಮುನ್ನಡೆ ಸಾಧಿಸುತ್ತಿದ್ದಂತೆ ಎಣಿಕೆ ಕೇಂದ್ರದ ಬಳಿ ಘರ್ಷಣೆ ನಡೆದಿದೆ.ಮರಿನಾ ಬೀಚ್ ನಲ್ಲಿರುವ ರಾಣಿ ಮೇರಿ ಕಾಲೇಜ್(ಮತ ಎಣಿಕೆ ಕೇಂದ್ರ) ಬಳಿ ದಿನಕರನ್ ಬೆಂಬಲಿಗರು –ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ.

ಚುನಾವಣಾಧಿಕಾರಿಯೊಂದಿಗೆ ಬೆಂಬಲಿಗರು ವಾಗ್ವಾದಕ್ಕೆ ಇಳಿದು ಗಲಾಟೆ ನಡೆಸಿದ್ದರಿಂದ ಮತ ಎಣಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...