alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲೂ ಕಡೆಗಣನೆಗೆ ಆರ್.ಜೆ.ಡಿ. ಆಕ್ರೋಶ

lalau

ಪಾಟ್ನಾ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್, ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಭಾರೀ ಸುದ್ದಿಯಾಗಿತ್ತು.

ಮದ್ಯ ಮಾರಾಟ ನಿಷೇಧಿಸಿದ್ದ ನಿತೀಶ್ ಕುಮಾರ್ ಕ್ರಮವನ್ನು ಮೋದಿ ಶ್ಲಾಘಿಸಿದರೆ, ನೋಟ್ ಬ್ಯಾನ್ ನಿರ್ಧಾರ ಕೈಗೊಂಡ ಮೋದಿ ಅವರನ್ನು ನಿತೀಶ್ ಕುಮಾರ್ ಕೊಂಡಾಡಿದ್ದರು.

ಗುರು ಗೋವಿಂದ್ ಸಿಂಗ್ ಅವರ 350 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮೋದಿ ಹಾಗೂ ನಿತೀಶ್ ಕುಮಾರ್ ವೇದಿಕೆ ಹಂಚಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಅವರನ್ನು ಕಡೆಗಣಿಸಲಾಗಿದೆ ಎಂದು ಪಕ್ಷದ ರಘುವಂಶ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾಮೈತ್ರಿಯ ಆಡಳಿತ ಬಿಹಾರದಲ್ಲಿದೆ. ಇದರ ಭಾಗವಾಗಿ ಲಾಲೂ ಪ್ರಸಾದ್ ಅವರು ವೇದಿಕೆಯ ಮೇಲೆ ಇರಬೇಕಿತ್ತು. ಆದರೆ, ಅವರನ್ನು ಪ್ರೇಕ್ಷಕರ ಸಾಲಿನಲ್ಲಿ ಕೂರಿಸಲಾಗಿದೆ. ಜನಪ್ರಿಯ ನಾಯಕನಾಗಿರುವ ಲಾಲೂ ಅವರನ್ನು ಹೀಗೆ ಕೂರಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...