alex Certify
ಕನ್ನಡ ದುನಿಯಾ       Mobile App
       

Kannada Duniya

‘ಭಾರತ್ ಬಂದ್’ ವೇಳೆ ನಡೆದಿದೆ ಯಡವಟ್ಟು

ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ದೇಶಾದ್ಯಂತ ನಡೆದ ಪ್ರತಿಭಟನೆ ಭಾಗವಾಗಿ ಬಿಹಾರದಲ್ಲಿ ಆರ್.ಜೆ.ಡಿ. ನಾಯಕರು ನಡೆಸಿದ ಎತ್ತಿನಗಾಡಿ ರ್ಯಾಲಿಯಲ್ಲಿ ಯಡವಟ್ಟಾಗಿದೆ.

ಬಿಹಾರದ ಮೋತಿಹಾರಿ ನಗರದಲ್ಲಿ ಆರ್.ಜೆ.ಡಿ. ವಿಧಾನಪರಿಷತ್ ಸದಸ್ಯ ಫೈಸಲ್ ರೆಹಮಾನ್ ನೇತೃತ್ವದಲ್ಲಿ ನಡೆದ ಎತ್ತಿನಗಾಡಿ ಮೆರವಣಿಗೆಯಲ್ಲಿ, ಎತ್ತುಗಳು ಕೈಕೊಟ್ಟು ಮನಸೋ ಇಚ್ಛೆ ಓಡಿವೆ.

ಗಾಡಿ ಓಡಿಸುತ್ತಿದ್ದವನು ಹರಸಾಹಸಪಟ್ಟು ಫೈಸಲ್ ರೆಹಮಾನ್ ಸೇರಿ ಯಾವುದೇ ಆರ್.ಜೆ.ಡಿ. ನಾಯಕರಿಗೆ ತೊಂದರೆಯಾಗದ ರೀತಿ ಗಾಡಿಯಿಂದ ಅವರನ್ನು ಇಳಿಸಿದ್ದಾನೆ.

ನಡೆದದ್ದೇನು ?
ಸೋಮವಾರದ ಬಂದ್ ನಲ್ಲಿ ಭಾಗವಹಿಸಲು ಫೈಸಲ್ ಹಾಗೂ ಇತರೆ ಕೆಲ ನಾಯಕರು ಹಾಗೂ ಆರ್.ಜೆ.ಡಿ. ನಾಯಕರು ಎತ್ತಿನಗಾಡಿಯಲ್ಲಿ ಹೊರಟಿದ್ದರು. ಕೆಲವರು ಎತ್ತಿನಗಾಡಿಯಲ್ಲಿ ಕುಳಿತುಕೊಂಡಿದ್ದರೆ, ಮತ್ತೆ ಕೆಲವರು ಕಾಲ್ನಡಿಗೆ ಮೂಲಕ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿಕೊಂಡು ಪ್ರತಿಭಟನೆ ನಡೆಸುತ್ತಿದ್ದರು.

ಆದರೆ ಮಾರ್ಗ ಮಧ್ಯೆ ಕಾರ್ಯಕರ್ತರೊಂದಿಗೆ ಮಾತನಾಡುವಾಗ, ಪ್ರತಿಭಟನಾ ಸ್ಥಳದ ಪಕ್ಕದಲ್ಲಿ ಜೋರಾದ ಶಬ್ದ ಬರುತ್ತಿದ್ದಂತೆ, ಒಂದು ಎತ್ತು ಬೆದರಿ ಓಡಲಾರಂಭಿಸಿತ್ತು. ಯಾವುದೇ ಸಮಸ್ಯೆ ಆಗಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಆರ್.ಜೆ.ಡಿ. ನಾಯಕರು, ಬಂದ್ ಅತ್ಯುತ್ತಮವಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆಯಿಲ್ಲದೇ ಶಾಂತಿಯುತವಾಗಿ ನಡೆದಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...