alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಪುರ ಏರ್ಪೋರ್ಟ್ ನಲ್ಲಿ ಬಿಟ್ಟಿ ಮನರಂಜನೆ

ಜೈಪುರ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ ನಡೆದಿದೆ. ಗಗನಸಖಿ ಹಾಗೂ ಪೈಲಟ್ ಸಾರ್ವಜನಿಕವಾಗಿಯೇ ಕಿತ್ತಾಡಿಕೊಂಡಿದ್ದಾರೆ. ನಂತರ ವ್ಯವಸ್ಥಾಪಕಿ, ಪೈಲಟ್ ಕಪಾಳಕ್ಕೆ ಬಾರಿಸಿದ್ದಾಳೆ. ಇಬ್ಬರ ಜಗಳ ಬಿಡಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಮಾಡಬೇಕಾಯ್ತು.

ಗಗನಸಖಿ ಅರ್ಪಿತಾ ಹಾಗೂ ಪೈಲಟ್ ಆದಿತ್ಯ ಕುಮಾರ್ ಮಧ್ಯೆ ಈ ಜಟಾಪಟಿ ನಡೆದಿದೆ. ಕೋಪದ ಭರದಲ್ಲಿ ಅರ್ಪಿತಾ, ಪೈಲಟ್ ಗೆ ಸೇರಿದ ಮೊಬೈಲ್ ಅನ್ನು ಕೂಡ ಒಡೆದು ಹಾಕಿದ್ದಾಳೆ. ಕೊನೆಗೆ ಇಬ್ಬರನ್ನೂ ಏರ್ಪೋರ್ಟ್ ಅಧಿಕಾರಿಗಳು ವಶಕ್ಕೆ ಪಡೆದ್ರು.

ವೈಯಕ್ತಿಕ ಕಾರಣಕ್ಕೆ ಇಬ್ರೂ ಕಿತ್ತಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಇವರ ಜಟಾಪಟಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜಗಳಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಗಗನಸಖಿ ಹಾಗೂ ಪೈಲಟ್ ಮಧ್ಯೆ ಮೊದಲಿನಿಂದ್ಲು ವೈಷಮ್ಯ ಇತ್ತು ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...