alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ನಿಶ್ಚಿತಾರ್ಥದಂದು ನೀತಾ ಅಂಬಾನಿಯ ಸಖತ್ ಸ್ಟೆಪ್ಸ್..!

ಆಕಾಶ್ ಅಂಬಾನಿಗೆ ಮದುವೆ ಫಿಕ್ಸ್ ಆದ ಬಳಿಕ ಇದೀಗ ಪುತ್ರಿಯ ಮದುವೆಯ ತಯಾರಿಯಲ್ಲಿದ್ದಾರೆ ಮುಕೇಶ್ ಅಂಬಾನಿ ದಂಪತಿ. ಇಶಾ ಅಂಬಾನಿ, ಪಿರಾಮಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆನಂದ್ ಪಿರಾಮಲ್ ರನ್ನ ಮದುವೆಯಾಗ್ತಿದ್ದಾರೆ.

ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಕಳೆದ ರಾತ್ರಿ ಬಾಂದ್ರಾದಲ್ಲಿರುವ ಅಂಬಾನಿ ನಿವಾಸ ಅಂಟಿಲ್ಲಾದಲ್ಲಿ ಆಯೋಜಿಸಲಾಗಿತ್ತು. ಇಶಾ ನಿಶ್ಚಿತಾರ್ಥಕ್ಕೆ ಬಾಲಿವುಡ್ ದಿಗ್ಗಜರಾದ ಶಾರೂಕ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್, ಕರಣ್ ಜೋಹರ್ ಸೇರಿದಂತೆ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡಾ ಭಾಗವಹಿಸಿದ್ರು.

ಮಗಳು ಇಶಾ ನಿಶ್ಚಿತಾರ್ಥಕ್ಕೆ, ಅಮ್ಮ ನೀತಾ ಅಂಬಾನಿ ಮಾಡಿದ ಡ್ಯಾನ್ಸ್ ಗೆ ನೆರೆದಿದ್ದ ಸ್ಟಾರ್ ಗಳು ಕೇಕೆ ಹಾಕಿ ಚಪ್ಪಾಳೆ ತಟ್ಟಿದ್ರು. ಇಂಗ್ಲೀಷ್-ವಿಂಗ್ಲಿಷ್ ಚಿತ್ರದ ಮರವಾಯಿ-ಮಾಝಿ ಹಾಡಿಗೆ ನೀತಾ ಸ್ಟೆಪ್ಸ್ ಹಾಕ್ತಿದ್ರೆ, ಸ್ಟೇಜ್ ಪಕ್ಕದಲ್ಲೇ ನಿಂತು ಮುಕೇಶ್ ಅಂಬಾನಿ, ಚಪ್ಪಾಳೆ ತಟ್ಟುತ್ತಾ ಪತ್ನಿಯನ್ನ ಹುರಿದುಂಬಿಸುತ್ತಿದ್ರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಶಾ ಮತ್ತು ಆನಂದ್ ಪಿರಾಮಲ್ ಅವರದ್ದು, ಇತ್ತೀಚಿನ ಪರಿಚಯವಲ್ಲ. ಇವರಿಬ್ಬರು ಹಲವು ವರ್ಷಗಳಿಂದ ಸ್ನೇಹಿತರು. ಅಲ್ಲದೆ ಪಿರಾಮಲ್ ಕುಟುಂಬ ಮತ್ತು ಅಂಬಾನಿ ಕುಟುಂಬ ಕಳೆದ ನಾಲ್ಕು ದಶಕಗಳಿಂದ ಸ್ನೇಹಿತರು. ಹೀಗಾಗಿ, ಇಶಾ -ಆನಂದ್ ಪ್ರೀತಿಗೆ ಉಭಯ ಕುಟುಂಬಗಳು ತಕ್ಷಣವೇ ಗ್ರೀನ್ ಸಿಗ್ನಲ್ ನೀಡಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...