alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದ್ ನಲ್ಲಿ ಕನ್ಹೈಯಾ ಮೇಲೆ ಚಪ್ಪಲಿ ಎಸೆತ

Kanhaiya

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯಾ ಕುಮಾರ್ ಮೇಲೆ ಇಂದು ಚಪ್ಪಲಿ ಎಸೆದ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಹೈದರಾಬಾದಿನ ಸುಂದರಯ್ಯ ವಿಜ್ಞಾನ ಭವನದಲ್ಲಿ ಎಐಎಸ್ಎಫ್ ಸಂಘಟನೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಕನ್ಹೈಯಾ ಕುಮಾರ್ ಭಾಷಣಕ್ಕೆ ಮುಂದಾದ ವೇಳೆ ಗೋ ರಕ್ಷಾ ದಳದ ಕಾರ್ಯಕರ್ತರಿಬ್ಬರು ಚಪ್ಪಲಿ ತೂರಾಟ ನಡೆಸಿದ್ದಾರೆ.

ಚಪ್ಪಲಿ ತೂರಿದವರನ್ನು ಹಿಡಿದು ಥಳಿಸಿರುವ ಎಐಎಸ್ಎಫ್ ಕಾರ್ಯಕರ್ತರು, ಬಳಿಕ ಅವರುಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತರನ್ನು ಪವನ್ ಕುಮಾರ್ ರೆಡ್ಡಿ ಹಾಗೂ ನರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಚಪ್ಪಲಿ ಎಸೆದ ಘಟನೆ ಕುರಿತಂತೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಕನ್ಹೈಯಾ ಕುಮಾರ್, ಇಂತಹ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲವೆಂದರಲ್ಲದೇ ತಮಗೆ ರೋಹಿತ್ ವೇಮುಲಾ ಆದರ್ಶ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...