alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಸಾವಿಗೆ ಕಾರಣವಾಯ್ತು ಸ್ತ್ರೀ ವೇಷಧಾರಿ ವಿಡಿಯೋ

ಚೆನ್ನೈ: ಮಹಿಳೆಯರ ವೇಷ ಧರಿಸಿ ಹಾಡೊಂದಕ್ಕೆ ಹೆಜ್ಜೆ ಹಾಕಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದೇ ಈತನ ಪಾಲಿಗೆ ಮುಳುವಾಯಿತು. ನೆಟ್ಟಿಗರ ಅಪಹಾಸ್ಯಭರಿತ ಕಾಮೆಂಟ್ ನಿಂದ ತೀವ್ರ ಮನನೊಂದ ಯುವಕ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಚೆನ್ನೈನ ವ್ಯಾಸರ್ಪಡಿಯ ಕನ್ನಿಕಾಪುರಂನ ವಿ. ಕಲೈಯರಸನ್ (24) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಾತ. ಈತ ಟಿಕ್ ಟಾಕ್ ಆ್ಯಪ್ ಮೂಲಕ ತನ್ನ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದ.

ಇದಕ್ಕೆ ಈತನ ಹಿಂಬಾಲಕರಿಂದ ಅನೇಕ ಅವಹೇಳನಕಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ತೃತೀಯ ಲಿಂಗಿ, ನಪುಂಸಕನೇ ಎಂಬಿತ್ಯಾದಿ ಕಮೆಂಟ್ ಗಳನ್ನು ಹಾಕಿದ್ದರಿಂದ ಕಲೈಯರಸನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಅಲ್ಲದೆ, ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಕ್ಕೆ ಆತನ ಕುಟುಂಬಸ್ಥರಿಂದಲೂ ಬೈಸಿಕೊಂಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇದರಿಂದ ತೀವ್ರ ಮನನೊಂದು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾನೆ. ಅಲ್ಲದೆ, ಆತ್ಮಹತ್ಯೆಗೆ ಮುನ್ನ ಕಲೈಯರಸನ್ ಇನ್ನೊಂದು ವಿಡಿಯೋ ಅಪ್ ಲೋಡ್ ಮಾಡಿದ್ದು, ನಾನು ಪುರುಷರ ಹಾಡಿನ ಹಲವಾರು ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ. ಆದರೆ, ಮಹಿಳೆ ಉಡುಪು ಧರಿಸಿ ಮಾಡಿದ ಈ ವಿಡಿಯೋಗೆ ಏಕೆ ಈ ರೀತಿಯ ಅಮಾನುಷವಾದ ಪ್ರತಿಕ್ರಿಯೆ ನೀಡಿದ್ದೀರಿ` ಎಂದು ನೊಂದು ಹೇಳಿಕೊಂಡಿದ್ದಾನೆ. ಸದ್ಯ ಈತನ ಟಿಕ್ ಟಾಕ್ ಖಾತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ನಿಂದನೆ ಮಾಡಿದ್ದವರನ್ನು ತನಿಖೆಗೊಳಪಡಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...