alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಲ್ಲಿ ನೀರು ತರಿಸುತ್ತೆ ರಿಕ್ಷಾ ಚಾಲಕನ ಈ ಸ್ಟೋರಿ

rickshaw-puller_759

ಜೀವನ ಅನ್ನೋದು ಅಚ್ಚರಿಗಳ ಸಂತೆ. ಯಾವಾಗ ಏನಾಗತ್ತೆ ಅನ್ನೋದನ್ನು ಹೇಳೋದು ಕಷ್ಟ. ಆದ್ರೆ ಉಪಕಾರ ಮಾಡಿದವರಿಗೆ ಅದಕ್ಕೆ ತಕ್ಕ ಪ್ರತಿಫಲ ಸಿಗತ್ತೆ ಅನ್ನೋದಂತೂ ನಿಶ್ಚಿತ. ಇದಕ್ಕೆ ಸಾಕ್ಷಿ ರಿಕ್ಷಾ ಚಾಲಕ ಬಬ್ಲೂ ಶೇಕ್.

ರೈಲ್ವೆ ಹಳಿ ಮೇಲೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಹುಡಗಿಯೊಬ್ಬಳನ್ನು ಬಬ್ಲೂ ಶೇಕ್ ರಕ್ಷಿಸಿದ್ದ. 8 ವರ್ಷಗಳ ನಂತರ ಆಕೆ ಮತ್ತೆ ಅವನನ್ನು ಭೇಟಿಯಾಗಿದ್ದಾಳೆ. ಜಿಬಿಎಂ ಆಕಾಶ್ ಎಂಬ ಫೇಸ್ಬುಕ್ ಪೇಜ್ ನಲ್ಲಿ ಬಬ್ಲೂ ಶೇಖ್ ರ ಕಥೆಯನ್ನು ಪೋಸ್ಟ್ ಮಾಡಲಾಗಿದೆ. ಇದಕ್ಕೆ 25,000ಕ್ಕೂ ಅಧಿಕ ಲೈಕ್ಸ್ ಬಂದಿವೆ.

ಬಬ್ಲೂ ಶೇಖ್ ಗೆ ಮೂವರು ಗಂಡು ಮಕ್ಕಳು. ಒಂದಾದ್ರೂ ಹೆಣ್ಣುಮಗು ಬೇಕು ಅನ್ನೋ ಆಸೆ ಅವರಿಗಿತ್ತು. 30 ವರ್ಷಗಳಿಂದ ರಿಕ್ಷಾ ಓಡಿಸಿ ಬದುಕು ಸಾಗಿಸ್ತಾ ಇದ್ದ ಬಡ ಕುಟುಂಬ ಅವರದ್ದು. ಯಾವಾಗಲೂ ಪ್ರಯಾಣಿಕರ ಬೈಗುಳ ಕೇಳಿ ಬಬ್ಲೂ ಸುಸ್ತಾಗಿದ್ರು. ಒಮ್ಮೆ ತಂದೆ ತನ್ನ ಮಗಳನ್ನು ಕಾಲೇಜಿಗೆ ಬಿಡಲು ರಿಕ್ಷಾವನ್ನು ಬಾಡಿಗೆ ಪಡೆದಿದ್ದ.

ಜಾಗರೂಕತೆಯಿಂದ ರಿಕ್ಷಾ ಓಡಿಸುವಂತೆ ಬಬ್ಲೂಗೆ ಸೂಚಿಸಿದ್ದ ಆತ, ಗಟ್ಟಿಯಾಗಿ ರಿಕ್ಷಾವನ್ನು ಹಿಡಿದುಕೊಂಡು ಕೂರುವಂತೆ ಮಗಳಿಗೆ ತಿಳಿಹೇಳಿ ಅಲ್ಲಿಂದ ತೆರಳಿದ್ದ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗಿ ಅಳಲಾರಂಭಿಸಿದ್ಲು. ಏನಾಯ್ತು ಕೇಳೋಣ ಅಂದ್ಕೊಂಡ್ರೆ ಹಿಂತಿರುಗಿ ನೋಡದಂತೆ ಬಬ್ಲೂಗೆ ಬೈದಿದ್ದಾಳೆ. ಯಾರಿಗೋ ಫೋನ್ ಮಾಡಿಕೊಂಡು ಅಳು ಮುಂದುವರಿಸಿದ್ಲು.

ಯಾರೋ ಹುಡುಗನ ಜೊತೆ ಓಡಿ ಹೋಗಲು ಮುಂದಾಗಿದ್ದಾಳೆ ಅಂತಾನೇ ಬಬ್ಲೂ ಅಂದ್ಕೊಂಡಿದ್ದ. ಆದ್ರೆ ಇದ್ದಕ್ಕಿದ್ದಂತೆ ಆಕೆ ರಿಕ್ಷಾದಿಂದ ಕೆಳಕ್ಕೆ ಜಿಗಿದವಳೇ ಸೀಟ್ ಮೇಲೆ ಬಬ್ಲೂಗೆ ಕೊಡಬೇಕಾಗಿದ್ದ ಹಣ ಇಟ್ಟು ರೈಲ್ವೆ ಟ್ರಾಕ್ ನತ್ತ ನಡೆದ್ಲು. ಆಗ ಬಬ್ಲೂಗೆ ಅವಳ ತಂದೆ ತೋರಿದ್ದ ಕಾಳಜಿ ನೆನಪಾಯ್ತು. ಮರಳಿ ಯುವತಿಯಿದ್ದ ಕಡೆಗೆ ಧಾವಿಸಿದ ಬಬ್ಲೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಪರಿಪರಿಯಾಗಿ ಬೇಡಿಕೊಂಡ.

ಮೊದಲು ಬಬ್ಲೂಗೆ ಬೈದ ಯುವತಿ, ನಂತರ ಬಿಕ್ಕಿಬಿಕ್ಕಿ ಅಳಲಾರಂಭಿಸಿದ್ಲು. ಸುಮಾರು ಮೂರು ಗಂಟೆಗಳ ಕಾಲ ಆಕೆ ಅಳುತ್ತಲೇ ಇದ್ಲು, ಬಬ್ಲೂ ಮೌನವಾಗಿ ಕುಳಿತಿದ್ದ. ನಂತರ ಅವಳನ್ನು ಮನೆಗೆ ಬಿಟ್ಟು ಬಬ್ಲೂ ತೆರಳಿದ್ದ. ಈ ವಿಷಯವನ್ನು ಯಾರಿಗೂ ಹೇಳದಂತೆ ಆ ಯುವತಿ ಮನವಿ ಮಾಡಿದ್ಲು. ಈ ಘಟನೆ ನಡೆದು 8 ವರ್ಷಗಳ ನಂತರ ಬಬ್ಲೂ ಅಪಘಾತದಲ್ಲಿ ಗಾಯಗೊಂಡಿದ್ದ.

ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಬಬ್ಲೂ ಆರೋಗ್ಯ ವಿಚಾರಿಸಲು ಬಂದಿದ್ದ ವೈದ್ಯೆಯನ್ನು ನೋಡಿ ಬಬ್ಲೂಗೆ ಅಚ್ಚರಿ. 8 ವರ್ಷಗಳ ಹಿಂದೆ ಬಬ್ಲೂ ರಕ್ಷಿಸಿದ್ದ ಯುವತಿಯೇ ಅವರನ್ನು ಉಪಚರಿಸಲು ಬಂದಿದ್ದ ವೈದ್ಯೆ. ನಂತರ ಆಕೆ ಬಬ್ಲೂನನ್ನು ಹಿರಿಯ ವೈದ್ಯೆ ಬಳಿ ಕರೆದೊಯ್ದಿದ್ದಳು, ಈತ ನನ್ನ ತಂದೆ, ಅಂದು ನನ್ನನ್ನು ಅವರು ಬದುಕಿಸದೇ ಇದ್ದರೆ ನಾನು ಡಾಕ್ಟರ್ ಆಗುತ್ತಲೇ ಇರಲಿಲ್ಲ ಎಂದ್ಲು. ಆ ಮಾತನ್ನು ಕೇಳಿ ಬಬ್ಲೂ ಕಣ್ಣಲ್ಲಿ ನೀರಾಡಿತ್ತು. ನನಗೂ ಒಬ್ಬ ಮಗಳಿದ್ದಾಳೆ, ಆಕೆ ಡಾಕ್ಟರ್ ಅಂತಾ ಕೂಗಿ ಹೇಳಬೇಕು ಎನಿಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...