alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಲ್ ಗೇಟ್ಸ್ ವಿಶ್ವದ ಶ್ರೀಮಂತ, ಮುಖೇಶ್ ಭಾರತದ ಸಿರಿವಂತ !

mukesh-ambani 852

‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರದಲ್ಲಿ ಅಣ್ಣಾವ್ರು ‘ಏನು ಮಾಯವೋ’ ಹಾಡಿನಲ್ಲಿ ‘ಹಳ್ಳದ ಕಡೆಗೆ ನೀರು ಹರಿವುದು, ಹಣವಂತರಿಗೆ ಹಣ ಸೇರುವುದು’ ಎಂದು ಹೇಳಿದ್ದರು. ಈ ಸಾಲುಗಳು ಸಾರ್ವಕಾಲಿಕವಾದವು ಎಂಬುದಂತೂ ಸುಳ್ಳಲ್ಲ. ಶ್ರೀಮಂತರ ಸಂಪತ್ತು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಈ ಸಾಲನ್ನು ಮತ್ತೆ ಮತ್ತೆ ನೆನಪಿಸುತ್ತವೆ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ‘ಹುರುನ್’ ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 5.44 ಲಕ್ಷ ಕೋಟಿ ರೂ. ಸಂಪತ್ತಿನ ಒಡೆಯರಾಗಿರುವ ವಿಶ್ವದ ಸಾಂಫ್ಟ್ ವೇರ್ ದಿಗ್ಗಜ ಬಿಲ್ ಗೇಟ್ಸ್ ಎಂದಿನಂತೆ ಮೊದಲ ಸ್ಥಾನದಲ್ಲಿದ್ದಾರೆ. 4.62 ಲಕ್ಷ ಕೋಟಿ ರೂ. ಆಸ್ತಿಯ ಒಡೆಯರಾಗಿರುವ ವಾರೆನ್ ಬಫೆಟ್ ಎರಡನೇ ಸ್ಥಾನದಲ್ಲಿದ್ದಾರೆ. 4.35 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಅಮಾನಿಕೊ ಒರ್ಟೆಗಾ ಮೂರನೇ ಸ್ಥಾನದಲ್ಲಿದ್ದಾರೆ. ಕಾರ್ಲೊಸ್ ಸ್ಲಿಮ್ ಹೆಚ್. 3.60 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದುವ ಮೂಲಕ 4ನೇ ಸ್ಥಾನದಲ್ಲಿದ್ದಾರೆ.

ಜೆಫ್ ಬಿಜೋಸ್ ಐದನೇ ಸ್ಥಾನದಲ್ಲಿದ್ದು, 3.40 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆ. ಈ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 1.76 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ 21 ನೇ ಸ್ಥಾನದಲ್ಲಿದ್ದಾರೆ. ಭಾರತದ ಶ್ರೀಮಂತರಲ್ಲಿ ಮುಖೇಶ್ ಮೊದಲ ಸ್ಥಾನದಲ್ಲಿದ್ದರೆ, ವಿಶ್ವದಲ್ಲಿ ಬಿಲ್ ಗೇಟ್ಸ್ ಮೊದಲಿಗರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...