alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಟಿ ಕೋಟಿ ಲಾಟರಿ ಗೆದ್ರೂ ಪಬ್ಲಿಸಿಟಿಗೆ ಒಲ್ಲೆ ಎಂದ ಕೋಟ್ಯಾಧೀಶರು

ಪಂಜಾಬ್ ನ ಮನ್ಸಾ ನಿವಾಸಿ ನಾಝಿರ್ ಖಾನ್ ಗೆ ಈಗ 50 ವರ್ಷ. ಮದುವೆ ಸಮಾರಂಭ, ರಾಜಕೀಯ ಕಾರ್ಯಕ್ರಮಗಳಲ್ಲಿ ಹಾಡು ಹೇಳುವುದೇ ಆತನ ಕಾಯಕವಾಗಿತ್ತು. ಆದ್ರೆ ಈಗ ಎಷ್ಟೋ ಮಂದಿ ತಮ್ಮ ಮಕ್ಕಳ ಮದುವೆ ಮಾಡಲು ಆತನ ಬಳಿ ಹಣದ ಸಹಾಯ ಕೇಳ್ತಾರೆ.

ಕಳೆದ ನವೆಂಬರ್ ನಲ್ಲಿ ಪಂಜಾಬ್ ಸರ್ಕಾರ ಪ್ರಕಟಿಸಿದ್ದ ದೀಪಾವಳಿ ಬಂಪರ್ ಲಾಟರಿ ವಿಜೇತರಲ್ಲಿ ನಾಝಿರ್ ಕೂಡ ಒಬ್ಬ. ಆದ್ರೆ ಬಹುಮಾನ ಮೊತ್ತದ 1.5 ಕೋಟಿ ರೂಪಾಯಿಯಲ್ಲಿ ಬಿಡಿಗಾಸು ಕೂಡ ನಾಝಿರ್ ಗೆ ಸಿಕ್ಕಿಲ್ಲ. ಶೇ.30 ರಷ್ಟು ತೆರಿಗೆ ಕಟ್ ಆಗಿ ಉಳಿದ ಹಣ ಬಂದಿದ್ರೂ ನಾಝಿರ್ ಕೋಟ್ಯಾಧೀಶನಾಗುತ್ತಿದ್ದ.

ಆದ್ರೆ ಸರ್ಕಾರ ಇನ್ನೂ ಹಣ ನೀಡಿಲ್ಲ ಅನ್ನೋದನ್ನು ಎಲ್ಲರಿಗೂ ವಿವರಿಸೋದು ಅಸಾಧ್ಯ. ಹೇಗಿದ್ರೂ ಒಂದೂವರೆ ಕೋಟಿ ಗೆದ್ದಿದ್ದಾನೆ, ಅವನ ಬಳಿ ಹಣವಿದೆ ಅಂದ್ಕೊಂಡು ಎಲ್ಲರೂ ಸಹಾಯ ಕೇಳ್ತಿದ್ದಾರೆ. ಲಾಟರಿ ಅವನ ಬದುಕಲ್ಲಿ ಹೊಸ ಬವಣೆ ತಂದಿಟ್ಟಿದೆ.

ಲಾಟರಿ ಗೆದ್ದವರ ಪೈಕಿ ಪಂಜಾಬ್ ಸರ್ಕಾರದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಸಮ್ಮತಿಸಿರೋದು ನಾಝಿರ್ ಮಾತ್ರ. ಜಾಹೀರಾತಿನಲ್ಲಿ ಕಾಣಿಸಿಕೊಂಡ್ರೆ ನೆಗೆಟಿವ್ ಪಬ್ಲಿಸಿಟಿ ಸಿಕ್ಕಿಬಿಡಬಹುದು ಅನ್ನೋದು ಉಳಿದವರ ಆತಂಕ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...