alex Certify
ಕನ್ನಡ ದುನಿಯಾ       Mobile App
       

Kannada Duniya

ಅಸಾದುದ್ದೀನ್ ಓವೈಸಿಯ ತಲೆ ಕತ್ತರಿಸಿ ಎಂದ ಶಿವಸೇನೆ

asaduddin-owaisi_650x400_71458023481

ಕುತ್ತಿಗೆ ಮೇಲೆ ಕತ್ತಿ ಇಟ್ಟರೂ ‘ಭಾರತ್ ಮಾತಾ ಕಿ ಜೈ’ ಎನ್ನುವುದಿಲ್ಲ ಎಂದಿದ್ದ ಅಸಾದುದ್ದೀನ್ ಓವೈಸಿ ವಿರುದ್ದ ಹರಿಹಾಯ್ದಿರುವ ಶಿವಸೇನೆ, ಕಾನೂನಾತ್ಮಕವಾಗಿಯೇ ಆತನ ಕತ್ತು ಕತ್ತರಿಸಿ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಕಿಡಿ ಕಾರಿದೆ.

ಓವೈಸಿ ಹೇಳಿಕೆ ನಡುವೆಯೂ ಆತನ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸಾಮ್ನಾದ ಸಂಪಾದಕೀಯದಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದು, ‘ಭಾರತ್ ಮಾತಾ ಕಿ ಜೈ’ ಎಂದು ಹೇಳುವುದಿಲ್ಲ ಎಂದ ಓವೈಸಿ ಅಂಥವರೇ ಸ್ಪೂರ್ತಿಯಾಗಿರುವುದರಿಂದ ಈ ದೇಶದ ಮುಸ್ಲಿಮರ ಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ತಿಳಿಸಿದೆ. ಅಲ್ಲದೇ ಇಂತಹ ಹೇಳಿಕೆ ನೀಡಿರುವ ಅಸಾದುದ್ದೀನ್ ಓವೈಸಿಯ ಶಿರಚ್ಛೇಧ ಮಾಡಿ ಎಂದು ಆಗ್ರಹಿಸಿದೆ.

ಅಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನೂ ಸಂಪಾದಕೀಯದಲ್ಲಿ ಕಟುವಾಗಿ ಟೀಕಿಸಿದ್ದು, ಒಂದೆಡೆ ಸಿಂಧುದುರ್ಗ್ ನಲ್ಲಿ ಪ್ರತಿಭಟನಾನಿರತ ಶಾಸಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಾರೆ. ಮತ್ತೊಂದೆಡೆ ರಾಷ್ಟ್ರದ್ರೋಹದ ಹೇಳಿಕೆ ನೀಡಿದ ಓವೈಸಿ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಇಬ್ಬಗೆಯ ನೀತಿಯಾಗಿದೆ ಎಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...