alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಲ್ಲದ ವೇಳೆ ಸೊಸೆ ರೂಮಿಗೆ ನುಗ್ಗಿದ ನಿವೃತ್ತ ಕ್ಲರ್ಕ್

ಭೂಪಾಲದಲ್ಲಿ ಸಚಿವಾಲಯದ ನಿವೃತ್ತ ಕ್ಲರ್ಕ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಮಾನಸಿಕ ಅಸ್ವಸ್ಥ ಮಗನಿಗೆ ಮೂರು ವಾರಗಳ ಹಿಂದೆ ಮದುವೆ ಮಾಡಿದ್ದ ನಿವೃತ್ತ ಕ್ಲರ್ಕ್, ಮಗ ಮನೆಯಲ್ಲಿಲ್ಲದ ವೇಳೆ ಸೊಸೆಗೆ ಕಿರುಕುಳ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಾಗ್ಪುರ ನಿವಾಸಿ 30 ವರ್ಷದ ಮಹಿಳೆ ಮದುವೆ ಏಪ್ರಿಲ್ 24ರಂದು ಸಚಿವಾಲಯದ ನಿವೃತ್ತ ಗುಮಾಸ್ತನ ಮಗನ ಜೊತೆ ನಡೆದಿತ್ತು. ಮೇ 12 ರಂದು ಮಗ ಮನೆಯಲ್ಲಿಲ್ಲದ ವೇಳೆ ಸೊಸೆ ಕೋಣೆಗೆ ನುಗ್ಗಿದ ಆರೋಪಿ ಬೆದರಿಸಿ ಅತ್ಯಾಚಾರವೆಸಗಿದ್ದಾನಂತೆ. ಸೊಸೆ ಹೆದರಿ ಸುಮ್ಮನಿದ್ದ ಕಾರಣ ಮತ್ತೆ ಜುಲೈ 25 ರಂದು ಅತ್ಯಾಚಾರ ನಡೆಸಿದ್ದಾನಂತೆ. ಮರುದಿನ ಮಹಿಳೆ ಚಿಕ್ಕಮ್ಮ ಮನೆಗೆ ಬಂದಿದ್ದಳು ಎನ್ನಲಾಗಿದೆ. ಆಕೆ ಮುಂದೆ ಪೀಡಿತ ಮಹಿಳೆ ತನ್ನ ನೋವು ತೋಡಿಕೊಂಡಿದ್ದಾಳೆ.

ಚಿಕ್ಕಮ್ಮ ಸಂಬಂಧಿಕರನ್ನು ಭೂಪಾಲ್ ಗೆ ಕರೆಯಿಸಿ ಪೊಲೀಸ್ ಠಾಣೆಯಲ್ಲಿ ಮಾವನ ವಿರುದ್ಧ ದೂರು ನೀಡಿದ್ದಾಳೆ. ಆರೋಪಿಯ ಪತ್ನಿ ಒಂದು ವರ್ಷದ ಹಿಂದೆಷ್ಟೇ ಸಾವನ್ನಪ್ಪಿದ್ದಾಳೆ. ಪೀಡಿತೆಯ ಪತಿ ಮಾನಸಿಕ ಅಸ್ವಸ್ಥನಂತೆ. ಆರಂಭದಲ್ಲಿಯೇ ಮಾವನ ನಡವಳಿಕೆ ಸರಿಯಿಲ್ಲ ಎಂಬುದು ಮಹಿಳೆಗೆ ತಿಳಿದಿತ್ತಂತೆ. ಮರ್ಯಾದೆಗೆ ಅಂಜಿ ಸುಮ್ಮನಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...