alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತ ಶಿಕ್ಷಕರಿಂದ ಮೈಕ್ ಕಿತ್ತುಕೊಂಡ ಕೇಂದ್ರ ಸಚಿವ

ಅಸ್ಸಾಂ ನ ನಾಗೋನ್ ಜಿಲ್ಲೆಯಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವೊಂದರಲ್ಲಿ ಕೆಟ್ಟದಾಗಿರುವ ರಸ್ತೆಗಳ ಬಗ್ಗೆ ಮಾತನಾಡುತ್ತಿದ್ದ ನಿವೃತ್ತ ಶಿಕ್ಷಕರನ್ನು ಕೇಂದ್ರ ಮಂತ್ರಿ ಮಧ್ಯದಲ್ಲೇ ತಡೆದ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಕೆಲ ಅಧಿಕಾರಿಗಳು ಮಾತನಾಡಿದ ಬಳಿಕ ನಿವೃತ್ತ ಶಿಕ್ಷಕರು ಇಲ್ಲಿನ ರಸ್ತೆಗಳ ರಿಪೇರಿ ಬಗ್ಗೆ ಸಾಕಷ್ಟು ಸಲ ಅಧಿಕಾರಿಗಳಿಗೆ, ಕ್ಷೇತ್ರದ ಶಾಸಕರಿಗೆ ಮನವಿ ನೀಡಿರುವುದಾಗಿಯೂ, ಆದರೂ ಏನೂ ಕ್ರಮ ಕೈಗೊಂಡಿರದ ಬಗ್ಗೆ ವೇದಿಕೆ ಮೇಲೆ ಹೇಳತೊಡಗಿದ್ದರು.

ಮಧ್ಯೆಯೇ ಎದ್ದು ನಿಂತ ಕಿರಿಯ ರೈಲ್ವೆ ಸಚಿವ ರಾಜೇನ್ ಗೋಹೈನ್ ಅವರ ಮಾತನ್ನು ತುಂಡರಿಸಿ ಮೈಕನ್ನು ಕಸಿದುಕೊಂಡಿದ್ದಾರೆ. ಅಲ್ಲದೇ ಅಧಿಕಾರಿಗಳ ಜೊತೆ ಮಾತನಾಡಬೇಕು ಹೊರತು ಭಾಷಣ ಮಾಡುವುದರಿಂದ ಏನೂ ಪ್ರಯೋಜನವಾಗದು ಎಂದು ಸಿಡುಕಿದ್ದಾರೆ. ಅಲ್ಲದೇ ಮಾತು ಮುಂದುವರಿಸಲು ನಿವೃತ್ತ ಶಿಕ್ಷಕರಿಗೆ ಯಾವುದೇ ಅವಕಾಶವನ್ನೂ ನೀಡಿಲ್ಲ. ಇನ್ನು ಸಚಿವ ಗೋಹೈನ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...