alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪರ್ಕ ಸಾಧಿಸಲು ಜಾಗಟೆ ಕಟ್ಟಿದ ಗ್ರಾಮಸ್ಥರು

ಒರಿಸ್ಸಾ ರಾಜ್ಯದ ಕುಗ್ರಾಮವೊಂದರಲ್ಲಿ ವಿದ್ಯುತ್ ಕಡಿತವಾಗಿ ಐದು ತಿಂಗಳಾದರೂ ಸರಿ ಹೋಗದ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಜಾಗಟೆ ಕಟ್ಟಿ, ಸಂಪರ್ಕ ಸಾಧಿಸುತ್ತಿದ್ದಾರೆ.

ಒರಿಸ್ಸಾದ ಬೆಟ್ಟದಲ್ಲಿರುವ ಪಾಸ ಎಂಬ ಕುಗ್ರಾಮದಲ್ಲಿ ಕೇವಲ‌ 35 ಬುಡಕಟ್ಟು ಜನಾಂಗದ ಕುಟುಂಬಗಳು ವಾಸವಾಗಿದ್ದು, ಈ ಹಳ್ಳಿಗೆ ಕಳೆದ ಐದು ತಿಂಗಳ ಹಿಂದೆ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಕಡಿತವಾಗಿದೆ.

ಆದರೆ ಇಲ್ಲಿಯವರೆಗೂ ರಿಪೇರಿಯಾಗದೆ ವಿದ್ಯುತ್ ಬಾರದಿರುವುದರಿಂದ, ಸಂವಹನ ಸಾಧಿಸಲು ಯಾವುದೇ ಮೊಬೈಲ್ ಹಾಗೂ ಇತರೆ ಸಂಪರ್ಕ ಸಾಧನಗಳು ಹಾಳಾಗಿದ್ದರಿಂದ ಜಾಗಟೆಯನ್ನು ಕಟ್ಟಿ ಊರೊಳಗೆ ಸಂವಹನ ನಡೆಸುತ್ತಿದ್ದಾರೆ.

ಈ ಜಾಗಟೆಯನ್ನು‌ ಕೇವಲ ತುರ್ತು ಪರಿಸ್ಥಿತಿ ಸಮಯದಲ್ಲಿ ಮಾತ್ರ ಬಳಸಲಾಗುವುದು. ಇಲ್ಲಿಯವರೆಗೆ ಒಟ್ಟು 8-10 ಬಾರಿ ಬಾರಿಸಿದ್ದು, ಮಗು ಹುಟ್ಟಿದಾಗ, ಅಪಘಾತ ಸಂಭವಿಸಿದಾಗ ಹಾಗೂ ಒಮ್ಮೆ ಗ್ರಾಮಸ್ಥರು ಮೃತರಾದಾಗ ಬಾರಿಸಲಾಗಿದೆ.

ಇನ್ನು ನಾಲ್ಕೈದು ಬಾರಿ‌‌ ಗ್ರಾಮಸ್ಥರು ಸಭೆ ನಡೆಸಲು ಇದನ್ನು ಬಳಸಲಾಗಿದೆ ಎಂದು ಗ್ರಾಮದ ಮುಖ್ಯಸ್ಥ ಕುಮಾರ್ ಸುನಾಮಾಜಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈ ರೀತಿ ವಿದ್ಯುತ್ ಇಲ್ಲದೇ ಇರುವುದರಿಂದ, ಗ್ರಾಮಸ್ಥರ ನಡುವೆ ಬಾಂಧವ್ಯ ಹೆಚ್ಚಾಗಿದೆ. ತುರ್ತು ಪರಿಸ್ಥಿತಿಯಲ್ಲಿ‌ ಹೇಗಿರಬೇಕು ಎನ್ನುವ‌ ಅನುಭವವಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...