alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಯೇನು ಗೊತ್ತಾ?

1950ರ ಜನವರಿ 26ರಂದು ಮೊದಲ ಬಾರಿಗೆ ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯ್ತು. ಆಗ ಮುಖ್ಯ ಅತಿಥಿಯಾಗಿದ್ದವರು ಆಗ್ನೇಯ ಏಷ್ಯಾದ ನಾಯಕ, ಇಂಡೋನೇಷ್ಯಾದ ಅಧ್ಯಕ್ಷರಾಗಿದ್ದ ಸುಕರ್ನೋ ಅವರು. ಅದಾದ್ಮೇಲೆ ಈವರೆಗೆ ಐವರು ಆಗ್ನೇಯ ಏಷ್ಯಾದ ಮುಖಂಡರು ಗಣರಾಜ್ಯೋತ್ಸವ ಪರೇಡ್ ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

ಆದ್ರೆ ಈ ಬಾರಿ 10 ಏಷಿಯಾನ್ ರಾಷ್ಟ್ರಗಳ ನಾಯಕರು ರಿಪಬ್ಲಿಕ್ ಡೇ ಪರೇಡ್ ನಲ್ಲಿ ಭಾಗವಹಿಸಲಿದ್ದಾರೆ. ಥೈಲ್ಯಾಂಡ್, ವಿಯೆಟ್ನಾಮ್, ಇಂಡೋನೇಷ್ಯಾ, ಮಲೇಷಿಯಾ, ಫಿಲಿಪೈನ್ಸ್, ಸಿಂಗಾಪುರ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರೂನಿ ದೇಶಗಳ ಪ್ರತಿನಿಧಿಗಳು ರಾಜ್ಪಥದಲ್ಲಿ ನಡೆಯುವ ಪರೇಡ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

10 ರಾಷ್ಟ್ರಗಳ ನಾಯಕರು ನಮ್ಮ ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆಯದಂಥ ಘಟನೆ ಇದು. ಇತಿಹಾಸದ ಪುಟಗಳಲ್ಲಿ ಕೂಡ ಈ ಬಾರಿಯ ಗಣರಾಜ್ಯೋತ್ಸವ ದಾಖಲಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...